ಹೊಸದಿಗಂತ ವರದಿ ಮಂಗಳೂರು:
ಮಂಗಳೂರು ತಾಲೂಕಿನ ಗಂಜಿಮಠ ಮಾರ್ಗದಂಗಡಿ ನಿವಾಸಿ ಎಸ್.ಕೆ. ಭವಾನಿ ಎಂಬವರ ಪುತ್ರ ನಿಖಿಲ್ (31) ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದು, ಈಗ ಚಿಕಿತ್ಸೆ ವೆಚ್ವ ಭರಿಸಲಾಗದೆ ದಿಕ್ಕುತೋಚದ ಈ ಬಡಕುಟುಂಬ ಸಹೃದಯಿಗಳ ನೆರವಿನ ಹಸ್ತದ ನಿರೀಕ್ಷೆಯಲ್ಲಿ ಕ್ಷಣ ಕ್ಷಣಗಳನ್ನು ಕಳೆಯುತ್ತಿದೆ…

ನಿಖಿಲ್, ಮಿದುಳು ಮತ್ತು ಶ್ವಾಸಕೋಶದ ಗಾಯಗಳಿಂದ ಬಹಳುತ್ತಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮಗನ ಚಿಕಿತ್ಸೆಗೆ ಭವಾನಿ ಅವರು ಈಗಾಗಲೇ ಇದ್ದ ಹಣವನ್ನೆಲ್ಲಾ ಆಸ್ಪತ್ರೆಗೆ ವ್ಯಯಿಸಿದ್ದಾರೆ. ಬಡತನದಲ್ಲಿ ಬದುಕುತ್ತಿರುವ ಅವರ ಕುಟುಂಬಕ್ಕೆ ನಿಖಿಲ್ ಒಬ್ಬರೇ ಆಸರೆಯಾಗಿದ್ದರು. ಆದರೆ ಅವರು ಅಪಘಾತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಮನೆ ಮಂದಿ ಬದುಕು ಡೋಲಾಯಮಾನವಾಗಿದೆ.

ನಿಖಿಲ್ಗೆ ಚಿಕಿತ್ಸೆಗೆ ಆರ್ಥಿಕ ನೆರವು ಬೇಕಿದ್ದು ಸಹೃದಯಿಗಳು ನೆರವಾಗುವಂತೆ ಭವಾನಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನಿಖಿಲ್ ಚಿಕಿತ್ಸೆಗೆ ನೆರವು ನೀಡುವ ದಾನಿಗಳು ಭವಾನಿ ಅವರ ಕುಪ್ಪೆಪದವಿನಲ್ಲಿರುವ ಎಸ್ಬಿಐ ಬ್ಯಾಂಕ್ ಖಾತೆ ಸಂಖ್ಯೆ: 40857742031, ಐಎಫ್ಎಸ್ಸಿ ಸಂಖ್ಯೆ: ಎಸ್ಬಿಐಎನ್ 0005623 ಮೂಲಕ ನೆರವಾಗಬಹುದು.

ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9611173752 ಸಂಪರ್ಕಿಸಬಹುದು. ಬನ್ನಿ, ನಾವೂ ನೆರವಾಗೋಣ, ಬಡಕುಟುಂಬದ ಈ ಅಮ್ಮನ ಮುಖದಲ್ಲಿ ಭರವಸೆಯ ನಗುವರಳಿಸೋಣ, ಧೈರ್ಯ ತುಂಬೋಣ…



