October 5, 2026
Monday, October 5, 2026
spot_img

ರಷ್ಯಾ ಮೇಲೆ ನಿಗೂಢ ಕಾಯಿಲೆ ಅಟ್ಯಾಕ್? ಲ್ಯಾಬ್ ಸಿಬ್ಬಂದಿ ಬಲಿ, ಕ್ವಾರಂಟೀನ್ ನಲ್ಲಿ 197 ಮಂದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಷ್ಯಾದ ಸೈಬೀರಿಯಾ ಪ್ರದೇಶದಲ್ಲಿ ನಿಗೂಢ ವೈರಸ್‌ನಿಂದಾಗಿ ಲ್ಯಾಬ್‌ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಪ್ರಕರಣದ ಗಂಭೀರತೆಯನ್ನು ಅರಿತು 197 ಮಂದಿಗೆ ಕ್ವಾರಂಟೀನ್‌ನಲ್ಲಿ ಇಡಲಾಗಿದೆ.

ಶೆಲೆಖೋವ್‌ನಲ್ಲಿರುವ ಇರ್ಕುಟ್ಸ್‌ ಆಂಟಿ ಪ್ಲೇಗ್‌ ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 28 ವರ್ಷದ ಡಾರಿಯಾ ಶಿಪಿಲೋವಾ ಎನ್ನುವ ಲ್ಯಾಬೋರೇಟರಿ ಅಸಿಸ್ಟೆಂಟ್‌ ಪ್ರಾಣಬಿಟ್ಟಿದ್ದಾರೆ. ಉಳಿದ ಸಿಬ್ಬಂದಿಯ ಪ್ರಕಾರ, ಡಾರಿಯಾ ಅವರು ಕೈಯಲ್ಲಿ ಬ್ಯಾಕ್ಟೀರಿಯಾ ತುಂಬಿದ್ದ ಟೆಸ್ಟ್‌ಟ್ಯೂಬ್‌ ಇತ್ತು, ತಪ್ಪಿನಿಂದಾಗಿ ಅದನ್ನು ಒಡೆದುಹಾಕಿದ್ದರು ಎಂದು ಹೇಳಿದ್ದಾರೆ.

ಇತರ ಸಿಬ್ಬಂದಿಯಲ್ಲೂ ಕಾಯಿಲೆ ಲಕ್ಷಣ!

ಕೆಲವೇ ದಿನಗಳಲ್ಲಿ ಅವರಲ್ಲಿ ಪ್ಲೇಗ್‌ನ ಲಕ್ಷಣಗಳು ಕಾಣಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ವೇಳೆ ಲ್ಯಾಬ್‌ನಲ್ಲಿದ್ದ ಇತರ ಸಿಬ್ಬಂದಿಗಳಿಗೂ ಕೆಲ ಲಕ್ಷಣಗಳು ಕಾಣಿಸಿವೆ. ಆದರೆ ಎಲ್ಲ ಟೆಸ್ಟ್‌ಗಳು ನೆಗೆಟಿವ್‌ ಬಂದಿವೆ. ʼನಿಗೂಢ ಕಾಯಿಲೆʼ ಎಂದು ಹೇಳಲಾಗುತ್ತಿದೆ ಆದರೆ ಇದು ʼಪ್ಲೇಗ್‌ʼ ಎಂದು ಎಲ್ಲೆಡೆ ಶಂಕೆ ವ್ಯಕ್ತವಾಗಿದೆ. ಆದರೆ ರಷ್ಯಾದ ಸಾರ್ವಜನಿಕ ಆರೋಗ್ಯ ಸಂಸ್ಥೆ ಇದು ರೊಸ್ಪೊಟ್ರೆಬ್‌ನಜೊರ್‌ ಪ್ಲೇಗ್‌ ಎಂದು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಮಹಿಳಾ ಸಿಬ್ಬದಿಯ ಸಾವಿಗೆ ನ್ಯುಮೋನಿಯಾ ಕಾರಣ ಎಂದು ಸಂಸ್ಥೆ ಹೇಳಿಕೊಂಡಿದೆ. ಮಹಿಳೆಯರ ಸಂಪರ್ಕದಲ್ಲಿದ್ದ 197 ಮಂದಿಯನ್ನು ಸದ್ಯ ಕ್ವಾರೆಂಟೀನ್‌ ಮಾಡಲಾಗಿದೆ. ನೂರಕ್ಕೂ ಹೆಚ್ಚು ಮಂದಿಯನ್ನು ದೇಶದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿದ್ದು, ಆರೋಗ್ಯದಲ್ಲಿ ಸಣ್ಣ ಬದಲಾವಣೆಯನ್ನೂ ಗಮನಿಸಲಾಗುತ್ತಿದೆ. ಸದ್ಯ ಯಾರಿಗೂ ಪ್ಲೇಗ್‌ ಅಥವಾ ಇನ್ಯಾವುದೇ ಆರೋಗ್ಯ ಸಮಸ್ಯೆಯ ಲಕ್ಷಣ ಕಂಡುಬಂದಿಲ್ಲ.

ಸಾವಿಗೆ ಕಾರಣ ಪ್ಲೇಗ್‌ ಅಥವಾ ನ್ಯುಮೋನಿಯಾ?

ಮೃತ ಮಹಿಳೆಯು ಆಂಟಿ ಪ್ಲೇಗ್‌ ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹೀಗಾಗಿ ಈ ಪ್ರಕರಣದ ಬಗ್ಗೆ ಆತಂಕ ಮೂಡಿದೆ. ಮತ್ತೆ ಜಗತ್ತಿಗೆ ಪ್ಲೇಗ್‌ ಮಾರಿಯ ಭೀತಿ ಎದುರಾಗಿದೆ. ನ್ಯುಮೋನಿಕ್ ಪ್ಲೇಗ್ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಗಂಭೀರ ಸೋಂಕಾಗಿದೆ. ಸೋಂಕು ದೃಢಪಟ್ಟರೆ ಉಸಿರಾಟದ ಹನಿಗಳ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Must Read