October 6, 2026
Tuesday, October 6, 2026
spot_img

ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಇ-ಪೇಮೆಂಟ್ ಜಾರಿ: ರೈತರಿಗೆ ಕ್ಷಣಾರ್ಧದಲ್ಲೇ ಹಣ

  • ಎಸ್. ರುದ್ರೇಶ್ವರ

    ಹೊಸದಿಗಂತ ವರದಿ ರಾಮನಗರ :

    ಇಲ್ಲಿನ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಇನ್ನು ಮುಂದೆ ಗೂಡು ಹರಾಜು ಹಾಗೂ ತೂಕ ಪ್ರಕ್ರಿಯೆ ಮುಗಿದ ಮರುಕ್ಷಣವೆ ರೈತರ ಬ್ಯಾಂಕಿನ ಖಾತೆಗೆ ಹಣ ನೇರವಾಗಿ ಜಮೆಯಾಗಲಿದೆ. ಏಷ್ಯಾದ ಎರಡನೇ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ರಾಮನಗರ ಮಾರುಕಟ್ಟೆಯಲ್ಲಿ ಅ.1ರಿಂದ ಇ-ಪೇಮೆಂಟ್ ವ್ಯವಸ್ಥೆ ಜಾರಿಗೆ ಬಂದಿದೆ. ಇದರಿಂದ ರಾಜ್ಯದ ನಾನಾ ಜಿಲ್ಲೆಗಳಷ್ಟೇ ಅಲ್ಲದೆ ಹೊರ ರಾಜ್ಯಗಳಿಂದ ರೇಷ್ಮೆ ಗೂಡು ಮಾರಾಟಕ್ಕೆ ಬರುವ ರೈತರಿಗೂ ಅನುಕೂಲ ವಾಗಲಿದೆ. ಇದುವರೆಗೆ ಹರಾಜು ಮತ್ತು ತೂಕ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹಣಕ್ಕಾಗಿ ಮರುದಿನದವರೆಗೆ ಕಾಯಬೇಕಾದ ಪರಿಸ್ಥಿತಿ ಇತ್ತು.

ಮಾರುಕಟ್ಟೆ ವ್ಯವಸ್ಥೆ ಸುಧಾರಿಸುವ ಉದ್ದೇಶದಿಂದ ಇ-ಹರಾಜು, ಇ-ತೂಕ ಹಾಗೂ ಇ-ಪೇಮೆಂಟ್ ವ್ಯವಸ್ಥೆ ಅಳವಡಿಸಿ ಕೊಳ್ಳಲು ಎಂಟು ವರ್ಷಗಳ ಹಿಂದೆಯೇ ಆದೇಶವಾಗಿತ್ತು. ಇ-ಹರಾಜು ಮತ್ತು ಇ-ತೂಕ ವ್ಯವಸ್ಥೆ ಜಾರಿಯಾಗಿದ್ದರೂ, ಇ-ಪೇಮೆಂಟ್ ಮಾತ್ರ ಕಾರಣಾಂತರಗಳಿಂದ ಅನುಷ್ಠಾನಗೊಂಡಿರಲಿಲ್ಲ. ರೀಲರ್ಸ್‌ಗಳಿಂದ ಮಾರುಕಟ್ಟೆಗೆ ಹಣ ಪಾವತಿಯಾಗುವಲ್ಲಿ ವಿಳಂಬವಾಗುತ್ತಿದ್ದ ಕಾರಣ ರೈತರ ಖಾತೆಗೆ ಹಣ ಮರುದಿನ ಜಮೆಯಾಗುತ್ತಿತ್ತು. ಕೆಲ ಸಂದರ್ಭಗಳಲ್ಲಿ ಚೆಕ್ ಬೌನ್ಸ್, ಪಾವತಿ ವಿಳಂಬ ಸೇರಿದಂತೆ ರೈತರು ಸಮಸ್ಯೆ ಎದುರಿಸುತ್ತಿದ್ದರು. ಇದಕ್ಕೆ ಪರಿಹಾರವಾಗಿ ಇದೀಗ ನೇರ ಇ-ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.

ರಾಮನಗರ ರೇಷ್ಮೆ ಮಾರುಕಟ್ಟೆಗೆ ಪ್ರತಿದಿನ ಸರಾಸರಿ 40 ರಿಂದ 50 ಟನ್ ರೇಷ್ಮೆ ಗೂಡು ಆವಕವಾಗುತ್ತದೆ. ಪ್ರಮುಖವಾಗಿ ಬೈವೋಲ್ಟಿನ್ (ದ್ವಿತಳಿ) ಬಿಳಿಗೂಡಿನ ಅವಕ ಹೆಚ್ಚಾಗಿದೆ. ಪ್ರತಿದಿನ ಸುಮಾರು 4ರಿಂದ 5 ಕೋಟಿ ವಹಿವಾಟು ನಡೆಯುತ್ತಿದ್ದು, ವಾರ್ಷಿಕ ವಹಿವಾಟು 1,000 ಕೋಟಿಗೂ ಅಧಿಕವಾಗಿದೆ. ರಾಜ್ಯದ ಬೆಳಗಾವಿ, ವಿಜಯಪುರ, ಕಲಬುರಗಿ, ಧಾರವಾಡ, ಬಳ್ಳಾರಿ, ಮಂಡ್ಯ, ಮೈಸೂರು, ತುಮಕೂರು, ಚಿತ್ರದುರ್ಗ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಿಂದ ರೈತರು ಆಗಮಿಸುತ್ತಾರೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳು ನಾಡು ಹಾಗೂ ಕೇರಳದಿಂದಲೂ ರೇಷ್ಮೆ ಬೆಳೆಗಾರರು ಗೂಡು ಮಾರಾಟಕ್ಕೆ ಬರುತ್ತಾರೆ. ಸುಮಾರು 500 ರೀಲರ್ಸ್ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ.

ಇ-ಪೇಮೆಂಟ್ ವ್ಯವಸ್ಥೆಯಲ್ಲಿ ರೀಲರ್ಸ್ ಗಳಿಗೂ ಹೊಸ ಗೂಡು ನಿಯಮ ಜಾರಿಯಾಗಲಿದೆ. ಖರೀದಿಸುವ ರೀಲರ್ಸ್‌ಗಳು ಮಾರುಕಟ್ಟೆಗೆ ಬಂದಾಗಲೇ ನಿಗದಿತ ಖಾತೆಗೆ ಹಣ ಪಾವತಿಸಬೇಕು. ಹಣ ಪಾವತಿಸಿದ ಬಳಿಕವೇ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ.

ರೈತರು ಗೂಡನ್ನು ಮಾರುಕಟ್ಟೆಗೆ ತಂದಾಗ ಹಾಗೂ ಅಂದಾಜು ತೂಕ ಮಾಡಿ ಟೋಕನ್ ನೀಡಲಾಗುತ್ತದೆ. ಬಳಿಕ ಗೂಡು ಹರಾಜು ಇ-ತೂಕ ಪೂರ್ಣಗೊಂಡ ಮರುಕ್ಷಣವೇ ರೈತರ ಬ್ಯಾಂಕ್ ಖಾತೆಗೆ ಹಣ ನೇರವಾಗಿ ಜಮೆಯಾಗಲಿದೆ. ಇದಕ್ಕಾಗಿ ಅಗತ್ಯ ತಂತ್ರಾಂಶ ಅಭಿವೃದ್ಧಿಪಡಿಸಿ ಅಳವಡಿಸಲಾಗಿದೆ. ರೀಲರ್ಸ್‌ಗಳ ಸಭೆ ನಡೆಸಿ ವ್ಯವಸ್ಥೆಯ ಕುರಿತು ಅರಿವು ಮೂಡಿಸಲಾಗಿದೆ.

ಮಾರುಕಟ್ಟೆಯಲ್ಲಿ ಹರಾಜು ಮುಗಿದ ಬಳಿಕ ಸ್ಥಳೀಯ ರೈತರು ಜಾಲರಿಗಳಿಗೆ ಟವಲ್ ಕಟ್ಟುವುದು ಅಥವಾ ಗೂಡು ಇಡುವ ಮೂಲಕ ಸ್ಥಳ ಕಾಯ್ದಿರಿಸುತ್ತಿದ್ದರು. ಇದರಿಂದ ಉತ್ತರ ಕರ್ನಾಟಕ ಹಾಗೂ ಹೊರ ರಾಜ್ಯಗಳಿಂದ ತಡರಾತ್ರಿ ಆಗಮಿಸುವ ರೈತರಿ ಇದೀಗ ಜಾಲರಿ ಪಡೆಯಲು ತೊಂದರೆಯಾಗುತ್ತಿತ ಪದ್ಧತಿಗೂ ನಿರ್ಬಂಧ ಹೇರಲಾಗಿದೆ. ರೈತರು ಗೂಡನ್ನು ಮಾರುಕಟ ತಂದ ಬಳಿಕ ಅಂದಾಜು ತೂಕ ಮಾಡ ಟೋಕನ್ ಪಡೆಯಬೇಕು. ನೀಡಿದ ಜಾಲರಿಯಲ್ಲಿಯೇ ಇಡಬೇಕು. ಇದರಿಂದ ಟೋಕ ದೂ ಊರುಗಳಿಂದ ಬರುವ ರೈತರಿಗೆ ಸ್ಥಳದ ಸಹ ತಪಲಿದೆ.

ಅ.1ರಿಂದ ಇ-ಪೇಮೆಂಟ್ ವ್ಯವಸ್ಥೆ ಜಾರಿಗೆ ಬಂದಿದೆ. ಅಗತ್ಯ ತಂತ್ರಾಂಶ ಅಳವಡಿಸಲಾಗಿದ್ದು, ರೈತರು ಮತ್ತು ರೀಲರ್ಸ್ಗಳಿಗೆ ಅರಿವು ಮೂಡಿಸಲಾಗಿದೆ. ಗೂಡು ಹರಾಜು ಹಾಗೂ ತೂಕವಾದ ಮರುಕ್ಷಣವೇ ರೈತರ ಖಾತೆಗೆ ಹಣ ಜಮೆಯಾಗಲಿದೆ. ವ್ಯವಸ್ಥೆಯಲ್ಲಿ ಮಾನವ ಹಸ್ತಕ್ಷೇಪ ಇರುವುದಿಲ್ಲ. ಅನಗತ್ಯ ವಿಳಂಬ ತಪ್ಪಲಿದ್ದು, ರೈತರು ಸಕಾಲದಲ್ಲಿ ತಮ್ಮ ಗ್ರಾಮಗಳಿಗೆ ಮರಳಲು ಅನುಕೂಲವಾಗಲಿದೆ ಎಂದು ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟಯ ಉಪನಿರ್ದೇಶಕ ಕೈಲಾಶ್ ಮೂರ್ತಿ ತಿಳಿಸಿದರು.

Must Read