ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಚಿವರ ಟ್ರ್ಯಾಪ್ಗೆ ಯತ್ನ ನಡೆಯುತ್ತಿದೆ. ಎಲ್ಲರೂ ಹುಷಾರಾಗಿರಿ ಎಂದು ಸಿಎಂ ಡಿ.ಕೆ. ಶಿವಕುಮಾರ್ ಸಚಿವರಿಗೆ ವಾರ್ನಿಂಗ್ ನೀಡಿದ್ದಾರೆ.
ಎರಡು ತಂಡಗಳಿಂದ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ. ನಿಮ್ಮ ಪ್ರತೀ ಚಲನವಲನಗಳ ಬಗ್ಗೆ ನಿಗಾ ಇಡಲಾಗಿದೆ. ಖಾಸಗಿ ಸ್ಟಿಂಗ್ ಆಪರೇಷನ್ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಲ್ಲರೂ ಹುಷಾರಾಗಿರಿ ಎಂದು ಸಿಎಂ ಕಿವಿಮಾತು ಹೇಳಿದ್ದಾರೆ.
ಇನ್ನು ಡಿಕೆಶಿ ಸಂಪುಟದ ಯಾವ ಸಚಿವರು ಹೆಚ್ಚು ಅಲರ್ಟ್ ಆಗಿರಬೇಕು ಎನ್ನುವುದನ್ನು ಅವರಿಗೆ ಸಿಎಂ ಪ್ರತ್ಯೇಕವಾಗಿ ಹೇಳಿದ್ದಾರೆ. ಸ್ಟಿಂಗ್ ಆಪರೇಷನ್ಗಳನ್ನು ಐವರು ಸಚಿವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿದ್ದು, ಅವರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಐವರು ಸಚಿವರುಗಳ ಹೆಸರು ಬಹಿರಂಗಗೊಂಡಿಲ್ಲ.



