ಹೊಸದಿಗಂತ ವರದಿ ಹಾಸನ:
ಹಬ್ಬದ ಹಿನ್ನೆಲೆಯಲ್ಲಿ ಮಾವನ ಮನೆಗೆ ಬಂದಿದ್ದ 12 ವರುಷದ ಬಾಲಕ ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟ ಘಟನೆ ಅರಕಲಗೂಡು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಕಟ್ಟಾಯ ಹೋಬಳಿಯ ಕಾರ್ಲೇ ಮುಕಂದೂರು ಗ್ರಾಮದ ಗಿರೀಶ್ ಅವರ ಪುತ್ರ ಶರತ್ (12) ಮೃತ ಬಾಲಕ. ಹಬ್ಬದ ಹಿನ್ನೆಲೆಯಲ್ಲಿ ಶರತ್ ಸೋಮನಹಳ್ಳಿ ಗ್ರಾಮದ ತನ್ನ ಮಾವನ ಮನೆಗೆ ಬಂದಿದ್ದ. ಮನೆಯ ಸಂಪ್‌ಗೆ ಅಳವಡಿಸಲಾಗಿದ್ದ ಮೋಟಾರ್‌ನ ವಿದ್ಯುತ್ ಸಂಪರ್ಕದಿಂದ ಆಕಸ್ಮಿಕವಾಗಿ ಶಾಕ್‌ಗೆ ಒಳಗಾಗಿದ್ದಾನೆ ಎನ್ನಲಾಗಿದೆ. ಶಾಕ್‌ಗೆ ಒಳಗಾದ ಬಾಲಕನನ್ನು ಕುಟುಂಬಸ್ಥರು ಹಾಗೂ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಇದನ್ನೂ ಓದಿ:
ಶರತ್ ತಂದೆ-ತಾಯಿಗೆ ಏಕೈಕ ಪುತ್ರನಾಗಿದ್ದು, ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಘಟನೆ ಕುರಿತು ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ವಿದ್ಯುತ್ ಶಾಕ್‌ಗೆ ಕಾರಣವಾದ ನಿಖರ ಅಂಶಗಳ ಕುರಿತು ತನಿಖೆ ಮುಂದುವರಿದಿದೆ.



