October 7, 2026
Wednesday, October 7, 2026
spot_img

ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದೊಳಗೆ ಮಹಿಳೆಯ ಕೊಳೆತ ಶವ ಪತ್ತೆ;  ಗ್ರಾಮಸ್ಥರಲ್ಲಿ ಆತಂಕ

ಹೊಸದಿಗಂತ ವರದಿ ಹಾಸನ:

ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರು ಸಮೀಪದ ಬೆಟ್ಟದಹಳ್ಳಿ ಗ್ರಾಮದ ಬಳಿ ಹಾದುಹೋಗುವ ಹೇಮಾವತಿ ಅಣೆಕಟ್ಟಿನ ಬದುವಿನ ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮಂಗಳವಾರ ಸಂಜೆ ನಾಲೆಯಲ್ಲಿ ನೀರು ನಿಂತಿದ್ದ ಸಂಧರ್ಭದಲ್ಲಿ ಪ್ಲಾಸ್ಟಿಕ್ ಚೀಲವೊಂದು ಕಂಡುಬಂದಿದ್ದು, ಪರಿಶೀಲಿಸಿದಾಗ ಅದರೊಳಗೆ ಮಹಿಳೆಯ ಶವ ಇರುವುದು ಬೆಳಕಿಗೆ ಬಂದಿದೆ. ಮೃತ ಮಹಿಳೆಯ ಗುರುತು ಹಾಗೂ ಶವ ನಾಲೆಗೆ ಬಂದಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ:

ಸುಮಾರು ೬೦ ಅಡಿಗೂ ಹೆಚ್ಚು ಆಳವಿರುವ ನಾಲೆಯಲ್ಲಿ ಶವವನ್ನು ಮೇಲಕ್ಕೆತ್ತುವುದು ಸವಾಲಿನ ಕೆಲಸವಾಗಿದ್ದು, ಕೊಣನೂರು ಪೊಲೀಸರು ಶವವನ್ನು ಹೊರತೆಗೆಯಲು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಮಹಿಳೆಯ ಗುರುತು ಪತ್ತೆ ಹಾಗೂ ಘಟನೆಗೆ ಸಂಬಂಧಿಸಿದ ಕಾರಣಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Must Read