ಮೇಷ
ಒತ್ತಡ ಕಳೆದು ನಿರಾಳತೆ ತರುವ ಬೆಳವಣಿಗೆ. ಆಪ್ತರ ಜತೆಗಿನ ವೈಮನಸ್ಸು ಶಮನ. ಸಮಸ್ಯೆ ತರುವ ವಿಷಯ ಇತ್ಯರ್ಥವಾಗಲಿದೆ.
ವೃಷಭ
ಪ್ರತಿಯೊಂದು ವ್ಯವಹಾರದಲ್ಲೂ ಇಂದು ಸಹನೆಯಿಂದ ವರ್ತಿಸಿ. ಮಹತ್ವದ ಕಾರ್ಯಕ್ಕೆ ಕೈಹಾಕಬೇಡಿ. ಒತ್ತಡದಿಂದ ತಲೆನೋವು ಬಾಽಸೀತು.
ಮಿಥುನ
ಅನಿರೀಕ್ಷಿತ ಬೆಳವಣಿಗೆ ಮನಶ್ಯಾಂತಿ ಹಾಳು ಮಾಡಲಿದೆ. ಅದಕ್ಕೆ ಹೊಂದಿಕೊಳ್ಳಿ. ಸಂಘರ್ಷ ತಪ್ಪಿಸಿರಿ. ಅಸಹನೆಯ ವರ್ತನೆ ತೋರಬೇಡಿ.
ಕಟಕ
ಸಹನೆ ಕೆಡಿಸುವ ಪ್ರಸಂಗ ಎದುರಿಸುವಿರಿ. ಕೆಲಸದಲ್ಲಿ ವಿಳಂಬ, ಇತರರ ಅಸಹಕಾರ ಇದಕ್ಕೆ ಕಾರಣ. ಮನಸ್ಸು ಇತರೆಡೆ ಹರಿಯದಿರಲಿ.
ಸಿಂಹ
ಗ್ರಹಗತಿ ಇಂದು ನಿಮಗೆ ಪೂರಕ. ನಿಮ್ಮ ಕಾರ್ಯದಲ್ಲಿ ತೃಪ್ತಿಕರ ಪ್ರಗತಿ. ಪ್ರೀತಿಯಲ್ಲಿ ಸಮಾಧಾನಕರ ಬೆಳವಣಿಗೆ. ಧನವ್ಯಯ.
ಕನ್ಯಾ
ನಿಮ್ಮ ಆಕಾಂಕ್ಷೆ ಈಡೇರುವ ದಿನ. ಆಪ್ತರ ಜತೆ ಆತ್ಮೀಯ ಸಂಬಂಧ ಕಾಯ್ದುಕೊಳ್ಳಿ. ಏಕಾಂಗಿಗಳಿಗೆ ಸಂಗಾತಿ ಸಿಗುವರು. ಧನಲಾಭ.
ತುಲಾ
ವೃತ್ತಿಯಲ್ಲಿ ಪ್ರಗತಿ. ಉತ್ಸಾಹ ಹೆಚ್ಚಿಸುವ ಬೆಳವಣಿಗೆ. ನಿಮ್ಮ ಚಿಂತನೆಗೆ ಮನ್ನಣೆ. ಆರ್ಥಿಕ ಗುರಿ ಸಾಧನೆ. ದೈಹಿಕ ಬಳಲಿಕೆ ಸಂಭವ.
ವೃಶ್ಚಿಕ
ಮಹತ್ವದ ವಿಚಾರದಲ್ಲಿ ಕಠಿಣ ನಿರ್ಧಾರ ತಾಳಬೇಕು. ಯಾರಿಗೋ ನೋವು ಆದೀತೆಂದು ಮೃದುವಾಗಿ ವರ್ತಿಸಬೇಡಿ.
ಧನು
ಉದ್ದೇಶಿಸಿದ ಕಾರ್ಯ ಪೂರ್ಣ. ಇತರರ ಶ್ಲಾಘನೆ. ಹಣ ಗಳಿಕೆಯ ಹಾದಿ ಸುಗಮ. ಆರೋಗ್ಯದ ಸಮಸ್ಯೆ ತುಸು ಕಾಡಬಹುದು.
ಮಕರ
ಪ್ರಗತಿಯ ದಿನ. ಆದರೂ ಕೆಲವರ ವಿರೋಧ ಕಟ್ಟಿಕೊಳ್ಳುವಿರಿ. ಕೆಲವು ವಿಷಯಗಳಲ್ಲಿ ಸಂಯಮದ ವರ್ತನೆ ಅವಶ್ಯ. ಧನಪ್ರಾಪ್ತಿ.
ಕುಂಭ
ನಿಮ್ಮ ಕಾರ್ಯದಲ್ಲಿ ಇಂದು ಹಿನ್ನಡೆ ಕಾಣುವಿರಿ. ಅಪೂರ್ಣ ಕೆಲಸ, ಅಸಹಕಾರ ಎದುರಿಸುವಿರಿ. ಮುಖ್ಯ ವಿಷಯದಲ್ಲಿ ಸಂವಹನದ ಕೊರತೆ.
ಮೀನ
ಭಾವನಾತ್ಮಕ ಏರುಪೇರು. ಸಂಗಾತಿ ಜತೆ ವೈಮನಸ್ಸು. ಹೊಂದಾಣಿಕೆ ಸಾಽಸಿ. ಧನಹಾನಿ ಉಂಟಾದೀತು. ಆರೋಗ್ಯದ ಬಗ್ಗೆ ಚಿಂತೆ.



