October 8, 2026
Thursday, October 8, 2026
spot_img

ನಾನಾ ಪಾಟೇಕರ್ ನಿಧನ: ಪುಣೆಯ ಫಾರ್ಮ್‌ಹೌಸ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದ ಮೇರು ನಟ, ಸಾಮಾಜಿಕ ಕಾರ್ಯಕರ್ತ ನಾನಾ ಪಾಟೇಕರ್ (75) ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರ ಅಗಲಿಕೆಯಿಂದಾಗಿ ಚಿತ್ರರಂಗ ಮಾತ್ರವಲ್ಲದೆ ಇಡೀ ದೇಶದ ಕಲಾಭಿಮಾನಿಗಳು ತೀವ್ರ ದುಃಖದಲ್ಲಿ ಮುಳುಗಿದ್ದಾರೆ.

ಮೂಲಗಳ ಪ್ರಕಾರ, ನಾನಾ ಪಾಟೇಕರ್ ಅವರ ಪಾರ್ಥಿವ ಶರೀರವನ್ನು ಗೋವಾದಿಂದ ಮಹಾರಾಷ್ಟ್ರದ ಪುಣೆ ನಗರಕ್ಕೆ ತರಲಾಗುತ್ತಿದೆ. ಪುಣೆ ನಗರದ ಹೊರವಲಯದಲ್ಲಿರುವ ದೊಂಜೆ ಗ್ರಾಮದ ಅವರ ಫಾರ್ಮ್‌ಹೌಸ್‌ನಲ್ಲಿ ಸಾರ್ವಜನಿಕರ ಹಾಗೂ ಅಭಿಮಾನಿಗಳ ಅಂತಿಮ ದರುಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ಸುಮಾರು 5 ಗಂಟೆಯ ವೇಳೆಗೆ ಪಾರ್ಥಿವ ಶರೀರ ತಲುಪಲಿದ್ದು, ಅದೇ ಫಾರ್ಮ್‌ಹೌಸ್ ಆವರಣದಲ್ಲಿಯೇ ಅವರ ಅಂತಿಮ ವಿಧಿವಿಧಾನಗಳು ಜರುಗಲಿವೆ ಎಂದು ಅವರ ‘ನಾಮ್ ಫೌಂಡೇಶನ್’ ಸಂಸ್ಥೆಯ ಸಿಇಒ ಗಣೇಶ್ ತೋರಾಟ್ ಮಾಹಿತಿ ನೀಡಿದ್ದಾರೆ.

ಪಾಟೇಕರ್ ಅವರ ಅಗಲಿಕೆಗೆ ಮಹಾರಾಷ್ಟ್ರ ಸರ್ಕಾರ ತೀವ್ರ ಕಂಬನಿ ಮಿಡಿದಿದೆ. ಮರಾಠಿ ರಂಗಭೂಮಿ, ಮರಾಠಿ ಸಿನಿಮಾ ಹಾಗೂ ಹಿಂದಿ ಚಲನಚಿತ್ರರಂಗಕ್ಕೆ ಅವರು ನೀಡಿದ ಅಪ್ರತಿಮ ಕೊಡುಗೆಯನ್ನು ಗೌರವಿಸಿ, ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಆಶಿಷ್ ಶೇಲಾರ್ ಘೋಷಿಸಿದ್ದಾರೆ.

Must Read