ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ತಮ್ಮ ಖಾಸಗಿ ಲೈಫ್ ಕುರಿತಾದ ಮತ್ತೊಂದು ಪೋಸ್ಟ್‌ನ್ನು ಇನ್ಸ್ಟಾಗ್ರಾಮ್‌ನಲ್ಲಿ ಮಾಡಿದ್ದಾರೆ. ದೊಡ್ಮನೆ ಸೊಸೆಯಾಗಿರುವ ಶ್ರೀದೇವಿ ತಮ್ಮ ಪತಿ ಯುವ ರಾಜ್‌ಕುಮಾರ್ ಎಂಥವರು ಎಂದು ಹೇಳುವಂತಹ ಪೋಸ್ಟ್ ಒಂದನ್ನು ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಇನ್ಸ್ಟಾದಲ್ಲಿ ಪೋಸ್ಟ್ ಮಾಡಿ, ಡಿಯರ್ ಹಸ್ಬೆಂಡ್! ಎಂದು ಬರೆದುಕೊಂಡು ತಮ್ಮ ಫೋಟೊಗಳನ್ನು ಅಪ್‌ಲೋಡ್ ಮಾಡಿದ್ದಾರೆ.
ಅವನ ಬಳಿ ನನ್ನ ಇದೇ ರೀತಿಯ ಸಾವಿರ ಫೋಟೊಗಳಿತ್ತು. ಗ್ಯಾಲರಿಯಲ್ಲಿ ಬರೀ ನನ್ನದೇ ಫೋಟೊಗಳು ತುಂಬಿದ್ದವು. ಆಗೆಲ್ಲಾ ನಾನೆಷ್ಟು ಸ್ಪೆಷಲ್, ಗಂಡ ನನ್ನನ್ನು ಎಷ್ಟು ಪ್ರೀತಿಸುತ್ತಾನೆ ಎಂದು ಅಂದುಕೊಂಡಿದ್ದೆ. ಆದರೆ ಕೆಲವೇ ದಿನಗಳಲ್ಲಿ ಅದೇ ಫೋನ್‌ನಲ್ಲಿ ಅದೇ ಗ್ಯಾಲರಿಯಲ್ಲಿ ಬೇರೆ ಹೆಣ್ಣುಮಕ್ಕಳ ಫೋಟೊ ನೋಡಿದ್ದೇನೆ.
https://www.instagram.com/reel/DeLrhYKJhyQ/?utm_source=ig_embed&ig_rid=Aba6HFOcWaI4Uu_FeeS4OLn
ಆ ಹುಡುಗಿಗೆ ಒಂದನ್ನು ಹೇಳೋಕೆ ಇಷ್ಟಪಡ್ತೀನಿ. ನೀನೂ ಏನೂ ಸ್ಪೆಷಲ್ ಇಲ್ಲ. ಫೋಟೊಗಳ ಮೇಲೆ ದೃಷ್ಟಿ ಆಗಬಾರದು ಅನ್ನೋ ಎಷ್ಟು ಇಮೋಜಿಗಳನ್ನು ಹಾಕಿದರೂ ಅಷ್ಟೆ. ಯಾವುದೂ ಯೂಸ್ ಇಲ್ಲ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಜನ ಕಮೆಂಟ್‌ಗಳ ಸುರಿಮಳೆ ಸುರಿಸಿದ್ದು, ದೊಡ್ಮನೆ ಸೊಸೆಯಾಗಿ ನೀವು ಹೀಗೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಬಾರದು. ಏನೇ ಸಮಸ್ಯೆ ಇದ್ದರೂ ನಿಮ್ಮ ನಿಮ್ಮಲ್ಲೇ ಮಾತನಾಡಿಕೊಂಡು ಸರಿ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಹಲವರು ಇಷ್ಟು ದೊಡ್ಡ ಪೋಸ್ಟ್ ಮಾಡಬೇಕು ಎಂದರೆ ನಿಮ್ಮ ಮೆಂಟಲ್ ಹೆಲ್ತ್ ಏನಾಗಿರಬಹುದು ಎಂದಿದ್ದಾರೆ. ಡಿವೋರ್ಸ್ ಕೊಡಿ ಮೂವ್ ಆನ್ ಆಗಿ ಅವರವರ ಕರ್ಮ ಅವರಿಗೆ ಇರುತ್ತದೆ ಎಂದು ಹೇಳಿದ್ದಾರೆ.



