March 13, 2026
Friday, March 13, 2026
spot_img

ಭಾರತ- ಪಾಕ್ ಕದನ ವಿರಾಮ ಕುರಿತು ಟ್ರಂಪ್ ಹೇಳಿಕೆ: ಪ್ರಧಾನಿ ಮೋದಿ ಮೌನ ಯಾಕೆ ಎಂದು ಕೇಳಿದ ರಾಹುಲ್ ಗಾಂಧಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಭಾರತ- ಪಾಕಿಸ್ತಾನ ನಡುವೆ ಕದನ ವಿರಾಮ ಜಾರಿಗೆ ತರಲು ತಾನೇ ಕಾರಣ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 25ನೇ ಬಾರಿ ಪುನರಾವರ್ತಿಸಿರುವುದನ್ನು ಗಮನಿಸಿದರೆ ಹಲವು ಸಂಶಯಗಳು ಮೂಡುತ್ತವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಕದನ ವಿರಾಮ ತರಲು ಟ್ರಂಪ್ ಯಾರು? ಅದು ಅವರ ಕೆಲಸವಲ್ಲ’. ಆದ್ರೆ ಈ ಬಗ್ಗೆ ಇಲ್ಲಿಯವರೆಗೂ ಪ್ರಧಾನಿ ನರೇಂದ್ರ ಮೋದಿ ಅವರೇಕೆ ಉತ್ತರ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

ಟ್ರಂಪ್ ಅವರ ಹೇಳಿಕೆಯನ್ನು ಗಮನಿಸಿದರೆ ಅವರೇ ಕದನ ವಿರಾಮ ಜಾರಿಗೆ ತಂದಂತಿದೆ. ಅದೀಗ ಜಗತ್ತಿಗೆ ತಿಳಿದಿದೆ. ಆದರೆ ಅದನ್ನು ನಮ್ಮ ಪ್ರಧಾನಿ ಹೇಳುತ್ತಾರೆಯೇ? ಅವರು ಅದನ್ನು ಹಾಗೆ ಹೇಳಲು ಸಾಧ್ಯವಿಲ್ಲ. ಆದರೆ ಅದೇ ಸತ್ಯ’ ಎಂದು ರಾಹುಲ್‌ ಹೇಳಿದರು.

ನಾವು ಕದನ ವಿರಾಮದ ಜತೆಗೆ ಇತರ ದೊಡ್ಡ ಸಮಸ್ಯೆಗಳನ್ನೂ ಚರ್ಚಿಸಲು ಬಯಸಿದ್ದೇವೆ. ಭದ್ರತೆ, ರಕ್ಷಣಾ ಉದ್ಯಮ, ಆಪರೇಷನ್ ಸಿಂದೂರದ ಬಗ್ಗೆ ಚರ್ಚೆ ನಡೆಸಬೇಕಿದೆ. ಆದರೆ, ದೇಶಭಕ್ತ ಎನಿಸಿಕೊಳ್ಳುವವರು ಓಡಿಹೋಗಿದ್ದಾರೆ. ಇದರ ಬಗ್ಗೆ ಒಂದು ಹೇಳಿಕೆಯನ್ನೂ ನೀಡಲು ಪ್ರಧಾನಿ ಅವರಿಂದ ಇಲ್ಲಿಯವರೆಗೂ ಸಾಧ್ಯವಾಗಿಲ್ಲ ಎಂದು ಅವರು ಕಿಡಿಕಾರಿದರು.

ಮೋದಿ ಅವರು ವಿದೇಶದಿಂದ ಹಿಂದಿರುಗಿದ ಬಳಿಕ ಆಪರೇಷನ್ ಸಿಂದೂರ್ ಬಗ್ಗ ಚರ್ಚೆ ನಡೆಸಲು ಸರ್ಕಾರ ಸಮ್ಮತಿಸಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !