October 9, 2026
Friday, October 9, 2026
spot_img

ಅಕ್ರಮ ಅಕ್ಕಿ ಸಾಗಾಟ: ಬಸವನಬಾಗೇವಾಡಿಯಲ್ಲಿ 9 ಕ್ವಿಂಟಾಲ್ ಪಡಿತರ ಅಕ್ಕಿ ವಶ

ಹೊಸದಿಗಂತ ವರದಿ ಬಸವನಬಾಗೇವಾಡಿ:

ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 9 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ತಾಲೂಕು ಆಹಾರ ಇಲಾಖೆ ಅಧಿಕಾರಿಗಳು ಶುಕ್ರವಾರ ವಾಹನ ಸಮೇತ ವಶಪಡಿಸಿಕೊಂಡಿದ್ದಾರೆ.

ಪಟ್ಟಣದ ಮುತ್ತಗಿ ರಸ್ತೆಯ ಪವಾಡ ಬಸವೇಶ್ವರ (ಗವಿ) ದೇವಸ್ಥಾನದ ಬಳಿ ಶುಕ್ರವಾರ ಸಂಜೆ ಆಹಾರ ನಿರೀಕ್ಷಕಿ ರೆಹಾನಾ ಅಬ್ಬಾಸಲಿ ಖಾದಿಮ್ ಅವರಿಗೆ ದೊರೆತ ಮಾಹಿತಿಯ ಮೇರೆಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಮುತ್ತಗಿ ಕಡೆಯಿಂದ ಬಸವನಬಾಗೇವಾಡಿ ಮಾರ್ಗವಾಗಿ ಇಂಗಳೇಶ್ವರಕ್ಕೆ ತೆರಳುತ್ತಿದ್ದ ಅರ್ಧ ನಂಬರ್ ಪ್ಲೇಟ್ ಅಳಿಸಲಾದ ಕಪ್ಪು-ಹಳದಿ ಬಣ್ಣದ ಫ್ಯಾಜೋ ವಾಹನವನ್ನು ತಡೆದು ಪರಿಶೀಲಿಸಿದಾಗ, 9 ಕ್ವಿಂಟಾಲ್ ಪಡಿತರ ಅಕ್ಕಿ ಪತ್ತೆಯಾಗಿದೆ.

ವಾಹನ ಚಾಲಕ ಇಂಗಳೇಶ್ವರದ ಶಿವಾನಂದ ಮೀಸಿ ಎಂಬಾತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಬಸವನಬಾಗೇವಾಡಿ ಪೊಲೀಸ್ ಠಾಣೆಯ ಎ.ಎಸ್.ಐ ಎಸ್.ವೈ.ಕುಪ್ಪಿಗೌಡರ, ಪೊಲೀಸ್ ಸಿಬ್ಬಂದಿಗಳಾದ ಭೀರಪ್ಪ ಹೊಕ್ರಾಣಿ, ಡಿ.ಎಲ್. ಪೂಜಾರಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ತಾಲೂಕು ಆಹಾರ ಶಿರಸ್ತೆದಾರ ಬಿ.ವಿ.ಅಗರಖೇಡ ಹಾಗೂ ಸಿಬ್ಬಂದಿಗಳು ಇದ್ದರು.

Must Read