October 10, 2026
Saturday, October 10, 2026
spot_img

ಸುಳ್ಯ ತಹಸೀಲ್ದಾರ್ ಮಂಜುಳಾ ಎಂ. ಮುಂಬಡ್ತಿ

ಹೊಸದಿಗಂತ ವರದಿ ಸುಳ್ಯ:

ಸುಳ್ಯ ತಹಸೀಲ್ದಾರ್ ಮಂಜುಳಾ ಎಂ. ಅವರಿಗೆ ಮುಂಬಡ್ತಿ ದೊರೆತಿದ್ದು, ಗ್ರೇಡ್‌-1 ವೃಂದದ ಅಧಿಕಾರಿಯಿಂದ ಕರ್ನಾಟಕ ಆಡಳಿತ ಸೇವೆ (ಕೆಎಎಸ್‌) ಕಿರಿಯ ಶ್ರೇಣಿ ವೃಂದಕ್ಕೆ ಉನ್ನತೀಕರಿಸಿ ಸರಕಾರ ಆದೇಶ ಹೊರಡಿಸಿದೆ.

ಪ್ರಸ್ತುತ ಸುಳ್ಯ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುಳಾ ಎಂ. ಅವರು ಇದೀಗ ಕೆಎಎಸ್‌ ಕಿರಿಯ ಶ್ರೇಣಿ ವೃಂದಕ್ಕೆ ಉನ್ನತೀಕರಣಗೊಂಡು ಮುಂದಿನ ಆದೇಶದ ವರೆಗೆ ಪ್ರಸ್ತುತ ಹುದ್ದೆಯಲ್ಲಿಯೇ ಮುಂದುವರೆಯಲಿದ್ದಾರೆ.

Must Read