October 10, 2026
Saturday, October 10, 2026
spot_img

ನೀರಾವರಿ ಸಮಸ್ಯೆ, ಎಡದಂಡೆ ಕಾಲುವೆ ಅವ್ಯವಸ್ಥೆ: ರಾಜ್ಯ ಸರ್ಕಾರದ ವಿರುದ್ಧ ಹೆದ್ದಾರಿ ತಡೆದು ರೈತರ ಆಕ್ರೋಶ

ಹೊಸದಿಗಂತ ವರದಿ ಯಾದಗಿರಿ:

ನಾರಾಯಣಪುರ ಎಡದಂಡೆ ಉಪ ಕಾಲುವೆ ಗೇಟ್ ಜಖಂಗೊಂಡ ಕಾರಣ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ ಎಂದು ಆರೋಪಿಸಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ನಡೆಸುತ್ತಿರುವ ರೈತರ ಹೋರಾಟ ಶನಿವಾರ ತೀವ್ರ ಸ್ವರೂಪ ತಾಳಿದೆ.

ನೀರಾವರಿ ಇಲಾಖೆ ಅಧಿಕಾರಿಗಳ ವಾಹನ ತಡೆದ ರೈತರು ಅಧಿಕಾರಿಯನ್ನು ವಾಹನದ ಮೇಲೆ ಕೂಡಿಸಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಹೆದ್ದಾರಿ ಬಂದ್ ಮಾಡಿ, ಟೈರ್‌ಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಗೇಟ್ ಜಖಂನಿಂದ ಕಳೆದ 3-4 ದಿನಗಳಿಂದ ಜಮೀನುಗಳಿಗೆ ನೀರು ಹರಿದಿಲ್ಲ. ಹೀಗಾಗಿ ಕೆಂಭಾವಿಯಲ್ಲಿ ನೂರಾರು ರೈತರಿಂದ ಏಕಾಏಕಿ ಪ್ರತಿಭಟನೆ ನಡೆಸಿದ್ದಾರೆ.

ಸಮರ್ಪಕ ನೀರು ಹರಿಸದ ಕಾರಣ ಪರಸನಹಳ್ಳಿ, ಕರಡಕಲ್, ಕನ್ನೆಳ್ಳಿ, ಕಚಕನೂರು ಸೇರಿ ಐದಾರು ಹಳ್ಳಿಗಳ ರೈತರಿಗೆ ಸಂಕಷ್ಟ ಎದುರಾಗಿದೆ.

Must Read