ಹೊಸದಿಗಂತ ವರದಿ ವಿಜಯಪುರ:
ಮಹಾರಾಷ್ಟ್ರದಿಂದ ಅಕ್ರಮವಾಗಿ ಕಾಡು ಹಂದಿ ಸಾಗಾಟದ ಖಚಿತ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 20 ಜೀವಂತ ಕಾಡು ಹಂದಿ ಹಾಗೂ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಘಟನೆ ಸೊಲ್ಲಾಪುರ ರಸ್ತೆಯ ತಿಡಗುಂದಿ ಟೋಲ್ ನಾಕಾ ಬಳಿ ನಡೆದಿದೆ.
ಧಾರವಾಡದ ನಾಗರಾಜ್, ಶಂಕ್ರೆಪ್ಪ, ಅಭಿಷೇಕ ಬಂಧಿತ ಆರೋಪಿಗಳು.
ಈ ಆರೋಪಿಗಳು ಕಾಡು ಹಂದಿಯ ಜೊತೆಗೆ ಸಾಮಾನ್ಯ ಹಂದಿಗಳ ಸಾಕಾಣಿಕ ಮಾಡುತ್ತಿದ್ದರು. ಇಂಡಿಯಿಂದ ಖರೀದಿ ಮಾಡಿದ್ದ ಕಾಡು ಹಂದಿಗಳು ಗೋವಾ ಸೇರಿದಂತೆ ಹಲವು ಕಡೆ ಮಾರಾಟ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.
ಅಕ್ರಮವಾಗಿ ಸಾಗಾಟ ಮಾಡಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ ಎಂದು ಆರ್.ಎಫ್.ಒ ಸಂತೋಷ ಅಜೂರ ಮಾಹಿತಿ ನೀಡಿದ್ದಾರೆ.



