October 11, 2026
Sunday, October 11, 2026
spot_img

ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಸ್ಟಾರ್ ಅಬ್ಬರ: ‘ಜೈಲರ್ 2’ ಮುಂಗಡ ಬುಕಿಂಗ್‌ನಲ್ಲಿ ಹೊಸ ಇತಿಹಾಸ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ತೆರೆಕಾಣಲು ಇನ್ನು ನಾಲ್ಕು ದಿನಗಳಷ್ಟೇ ಬಾಕಿ ಇವೆ. ಆದರೆ, ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರದ ಅಡ್ವಾನ್ಸ್ ಬುಕಿಂಗ್ ಜಾಗತಿಕ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ಬುಕಿಂಗ್ ಪ್ರಾರಂಭವಾದ ಕೇವಲ ಒಂದೇ ದಿನದಲ್ಲಿ ಚಿತ್ರವು ಜಾಗತಿಕವಾಗಿ ಬರೋಬ್ಬರಿ 20 ಕೋಟಿಗೂ ಅಧಿಕ ಮೊತ್ತದ ಮುಂಗಡ ಟಿಕೆಟ್ ಮಾರಾಟ ಮಾಡುವ ಮೂಲಕ ಹೊಸ ಇತಿಹಾಸ ಬರೆದಿದೆ.

ಅಕ್ಟೋಬರ್ 10 ರಂದು ಭಾರತದಲ್ಲಿ ಅಡ್ವಾನ್ಸ್ ಬುಕಿಂಗ್ ಪ್ರಾರಂಭವಾಗಿದ್ದರೆ, ವಿದೇಶಗಳಲ್ಲಿ ಅದಕ್ಕಿಂತ ಒಂದು ದಿನ ಮುಂಚಿತವಾಗಿಯೇ ಟಿಕೆಟ್‌ಗಳ ಮಾರಾಟ ಆರಂಭವಾಗಿತ್ತು. ಸದ್ಯ ಲಭ್ಯವಿರುವ ಮಾಹಿತಿಯಂತೆ, ವಿದೇಶಿ ಮಾರುಕಟ್ಟೆಯಲ್ಲೇ ಜೈಲರ್ 2 ಜಾದೂ ಕೆಲಸ ಮಾಡಿದ್ದು, ಸರಿಸುಮಾರು 17 ಕೋಟಿಗೂ ಹೆಚ್ಚು ಗಳಿಸಿ ಬಾಕ್ಸ್ ಆಫೀಸ್ ಮುನ್ನಡೆ ಸಾಧಿಸಿದೆ.

ಭಾರತದ ಎಲ್ಲಾ ರಾಜ್ಯಗಳಲ್ಲಿ ಪೂರ್ಣ ಪ್ರಮಾಣದ ಬುಕಿಂಗ್ ಆರಂಭವಾಗದಿದ್ದರೂ, ಕೇವಲ ಒಂದೇ ದಿನದಲ್ಲಿ 4 ಕೋಟಿಗೂ ಹೆಚ್ಚು ಮೊತ್ತದ ಅಡ್ವಾನ್ಸ್ ಬುಕಿಂಗ್ ಆಗಿದೆ. ಇದರಲ್ಲಿ ಮೊದಲ ದಿನದ ಶೋಗಳಿಗಾಗಿಯೇ 3.53 ಕೋಟಿಗೂ ಅಧಿಕ ಮೌಲ್ಯದ ಟಿಕೆಟ್‌ಗಳು ಮಾರಾಟವಾಗಿವೆ.

ಸಾಮಾನ್ಯವಾಗಿ ರಜನಿಕಾಂತ್ ಸಿನಿಮಾಗಳು ತಮಿಳುನಾಡಷ್ಟೇ ಅಲ್ಲದೆ ಹೊರರಾಜ್ಯಗಳಲ್ಲೂ ಉತ್ತಮ ಪ್ರದರ್ಶನ ಕಾಣುತ್ತವೆ. ಆದರೆ ಈ ಬಾರಿ ‘ಜೈಲರ್ 2’ ಸಿನಿಮಾದಲ್ಲಿ ವಿವಿಧ ಭಾಷೆಗಳ ಸ್ಟಾರ್ ನಟರ ಜೊತೆಗೆ ಹೃತಿಕ್ ರೋಷನ್ ಅವರ ಅತಿಥಿ ಪಾತ್ರವೂ ಇದೆಯೆಂಬ ವದಂತಿಗಳು ಹರಿಡಾಡುತ್ತಿದ್ದು, ಈ ಸಿನಿಮಾ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಹುದೊಡ್ಡ ಮಟ್ಟದ ಓಪನಿಂಗ್ ಪಡೆಯುವುದು ಖಚಿತವಾಗಿದೆ.

Must Read