October 13, 2026
Tuesday, October 13, 2026
spot_img

ತಿಪಟೂರಿನಲ್ಲಿ ದುರ್ಘಟನೆ: ಸ್ಕೂಟರ್ ಮೇಲೆ ಮರ ಬಿದ್ದು ನಿವೃತ್ತ ಶಿಕ್ಷಕ ದಾರುಣ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಲಿಸುತ್ತಿದ್ದ ಎಲೆಕ್ಟ್ರಿಕ್‌ ಸ್ಕೂಟರ್‌ ಮೇಲೆ ರಸ್ತೆ ಬದಿಯಲ್ಲಿದ್ದ ಮರವೊಂದು ಬಿದ್ದಿದ್ದು, ನಿವೃತ್ತ ಶಿಕ್ಷಕರೊಬ್ಬರು ಸ್ಥಳದಲ್ಲಿಯೇ ಪ್ರಾಣಬಿಟ್ಟ ಘಟನೆ ತುಮಕೂರು ಜಿಲ್ಲೆಯ ತಿಪಟೂರು ನಗರದಲ್ಲಿ ಸಂಭವಿಸಿದೆ.

ಸುಗುರು ಗ್ರಾಮದ ನಿವಾಸಿ ಶಿವಸ್ವಾಮಿ ಮೃತಪಟ್ಟ ದುರ್ದೈವಿ. 11.30ರ ಸುಮಾರಿಗೆ ಕಲ್ಪತರು ಕಾಲೇಜಿನ ಸಮೀಪ, ಕಾಲೇಜಿನ ಸಭಾಂಗಣದ ಮುಂಭಾಗದಲ್ಲಿ ಅವರು ವಿದ್ಯುತ್ ಚಾಲಿತ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ರಸ್ತೆ ಬದಿಯಲ್ಲಿದ್ದ ಒಣಗಿದ ಮರವು ಅವರ ಮೇಲೆ ಬಿದ್ದಿದೆ.

ಈ ನಡುವೆ ಮರವು ಒಣಗಿ ಹೋಗಿದ್ದರೂ ಅದನ್ನು ತೆರವುಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದೇ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇಂತಹ ಘಟನೆಗಳು ಮರುಕಳಿಸದಂತೆ ತಿಪಟೂರು ನಗರಸಭೆ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪ್ರಮುಖ ರಸ್ತೆ ಬದಿಗಳಲ್ಲಿರುವ ಒಣಗಿದ ಮತ್ತು ಅಪಾಯಕಾರಿಯಾದ ಮರಗಳನ್ನು ಗುರುತಿಸಿ ತೆರವುಗೊಳಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

Must Read