October 13, 2026
Tuesday, October 13, 2026
spot_img

Be Aware | ಸ್ಕ್ರೋಲ್ ಮಾಡುವುದರಲ್ಲೇ ಕಳೆಯುತ್ತಿದೆಯಾ ಸಮಯ? ಕೈ-ಬೆರಳುಗಳಿಗೆ ತಪ್ಪಿದ್ದಲ್ಲ ಅಪಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಿನವಿಡೀ ಹೆಬ್ಬೆರಳಿನಿಂದ ಸ್ಕ್ರೋಲ್ ಮಾಡುವುದು ಹಾಗೂ ಮೆಸೇಜ್ ಟೈಪ್ ಮಾಡುವುದರಿಂದ ಹೆಬ್ಬೆರಳಿನ ಸ್ನಾಯುಗಳ ಮೇಲೆ ಅತಿಯಾದ ಒತ್ತಡ ಬೀಳುತ್ತದೆ. ಇದನ್ನು ವೈದ್ಯಕೀಯವಾಗಿ ‘ಟೆಕ್ಸ್‌ಟಿಂಗ್ ಥಂಬ್’ ಎನ್ನಲಾಗುತ್ತದೆ. ಇದರಿಂದ ಹೆಬ್ಬೆರಳಿನ ಮೂಲ ಭಾಗದಲ್ಲಿ ತೀವ್ರ ಉರಿ, ನೋವು ಮತ್ತು ಚುರುಕು ಅನುಭವವಾಗುತ್ತದೆ.

ಫೋನ್ ಅನ್ನು ಒಂದೇ ಕೈಯಲ್ಲಿ ಗಂಟೆಗಟ್ಟಲೆ ಹಿಡಿದುಕೊಳ್ಳುವುದರಿಂದ ಮಣಿಕಟ್ಟಿನ ನರಗಳು ನಜ್ಜುಗುಜ್ಜಾಗುತ್ತವೆ. ‘ಕಾರ್ಪಲ್ ಟನಲ್’ ಎಂಬ ಜಾಗದಲ್ಲಿ ನರಗಳು ಒತ್ತಲ್ಪಟ್ಟು, ಇಡೀ ಕೈಯಲ್ಲಿ ಜುಮ್ಮೆನಿಸುವಿಕೆ, ಮರಗಟ್ಟುವಿಕೆ ಮತ್ತು ರಾತ್ರಿ ವೇಳೆಯಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ.

ಬಹಳಷ್ಟು ಜನರು ಫೋನ್ ಕೆಳಗೆ ಬೀಳದಿರಲಿ ಎಂದು ಕಿರುಬೆರಳಿನ ಬೆಂಬಲ ನೀಡುತ್ತಾರೆ. ಈ ರೀತಿ ನಿರಂತರವಾಗಿ ಫೋನ್‌ನ ತೂಕವನ್ನು ಕಿರುಬೆರಳಿನ ಮೇಲೆ ಹಾಕುವುದರಿಂದ ಆ ಬೆರಳಿನ ಆಕಾರವೇ ಬದಲಾಗುವ ಮತ್ತು ನೋವು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಮಣಿಕಟ್ಟು ಮತ್ತು ಬೆರಳುಗಳ ಸ್ನಾಯುಗಳು ವಿಶ್ರಾಂತಿಯಿಲ್ಲದೆ ದುಡಿಯುವುದರಿಂದ ಅವುಗಳ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಕಾಲಕ್ರಮೇಣ ಕೈಗಳಲ್ಲಿ ವಸ್ತುವನ್ನು ಹಿಡಿದುಕೊಳ್ಳುವ ಶಕ್ತಿ ಕಡಿಮೆಯಾಗಿ, ಹಿಡಿದ ವಸ್ತುಗಳು ಕೈಜಾರಿ ಬೀಳಲು ಪ್ರಾರಂಭಿಸುತ್ತವೆ.

ಸ್ಮಾರ್ಟ್‌ಫೋನ್‌ನ ನಿರಂತರ ಬಳಕೆಯು ಮಣಿಕಟ್ಟು ಮತ್ತು ಬೆರಳುಗಳನ್ನು ಜೋಡಿಸುವ ನರತಂತುಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಇದನ್ನು ‘ಟೆಂಡಿನೈಟಿಸ್’ ಎನ್ನುತ್ತಾರೆ. ಇದರಿಂದ ಕೈಗಳನ್ನು ಮಡಚಲು ಅಥವಾ ಸಣ್ಣ ಕೆಲಸಗಳನ್ನು ಮಾಡಲು ಸಹ ಸಾಧ್ಯವಾಗದಷ್ಟು ನೋವು ಉಂಟಾಗುತ್ತದೆ.

ಫೋನ್ ಬಳಸುವಾಗ ಮಧ್ಯೆ ಮಧ್ಯೆ ವಿರಾಮ ತಗೊಳ್ಳಿ. ಕನಿಷ್ಠ 20 ನಿಮಿಷಕ್ಕೊಮ್ಮೆ ಕೈ ಮತ್ತು ಬೆರಳುಗಳನ್ನು ಹಗುರವಾಗಿ ಸಾಫ್ಟ್ ಸ್ಟ್ರೆಚ್ ಮಾಡಿ, ಕೈಗಳಿಗೆ ವಿಶ್ರಾಂತಿ ನೀಡಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ.

Must Read