- ಎಸ್. ರುದ್ರೇಶ್ವರ
ರಾಮನಗರ : ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರದ ಕುಂದುಕೊರತೆಗಳ ಬಗ್ಗೆ ಸರ್ಕಾರಕ್ಕೆ ಅಮೂಲ್ಯ ಸಲಹೆಗಳನ್ನು ನೀಡಲಿ ಎಂಬ ಉದ್ದೇಶದೊಂದಿಗೆ, ಚಿಂತಕರ ಚಾವಡಿ ಎನಿಸಿರುವ ವಿಧಾನ ಪರಿಷತ್‌ನಲ್ಲಿ ಪ್ರಾತಿನಿಧ್ಯ ನೀಡಿರುವ ಶಿಕ್ಷಕರ ಕ್ಷೇತ್ರದ ಚುನಾವಣೆ ರಾಜಕಾರಣಿಗಳ ಆಡಂಬೋಲ ಆಗುವ ಮೂಲಕ ಈ ಸ್ಥಾನದ ರಚನೆಯ ಮೂಲ ಉದ್ದೇಶವನ್ನೇ ಅಣಕಿಸುವಂತಾಗಿದೆ. ನಮ್ಮ ರಾಜ್ಯದಲ್ಲಿ ಮೇಲ್ಮನೆಯ ಸ್ಥಾಪನೆಗೆ ವಿಶಿಷ್ಟವಾದ ಇತಿಹಾಸವಿದೆ. ಆಡಳಿತದಲ್ಲಿ ಸಲಹೆ ನೀಡಲಿ ಎಂಬ ಉದ್ದೇಶದಿಂದ ಮೈಸೂರು ಸಂಸ್ಥಾನ ದಲ್ಲಿ ಇಂದಿನ ವಿಧಾನ ಪರಿಷತ್ ಮಾದರಿಯಲ್ಲಿ ಪ್ರಜಾಪ್ರತಿನಿಧಿ ಸಭೆಯನ್ನು ರಚಿಸಲಾಗಿತ್ತು. ಸಂವಿಧಾನ ರಚನೆಯಾದ ವಿಧಾನ ಅನ್ನು ರಚಿಸಿದ್ದು, ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರದ ಕುಂದುಕೊರತೆಗಳನ್ನು ಆಲಿಸುವ ಉದ್ದೇಶದಿಂದ ವಿಧಾನ ಪರಿಷತ್‌ಗೆ 7 ಶಿಕ್ಷಕರ ಕ್ಷೇತ್ರಗಳನ್ನು ರಚಿಸಿ ಪ್ರತಿನಿಧಿಗಳನ್ನು ಕಳುಹಿಸಲು ಅವಕಾಶ ನೀಡ ಲಾಗಿದೆ. ವಿಪರ್ಯಾಸ ಎಂದರೆ ಈ 7 ಮಂದಿಯ ಪೈಕಿ ಬಸವರಾಜ ಹೊರಟಿ ಅವರನ್ನು ಹೊರತು ಪಡಿಸಿದರೆ ಉಳಿದವರು ಶಿಕ್ಷಕರಲ್ಲದೆ ರಾಜಕಾರಣಿಗಳಾಗಿದ್ದಾರೆ.
ಮೇಲ್ಮನೆಯ ಶಿಕ್ಷಕರ ಕ್ಷೇತ್ರಕ್ಕೆ ಮತದಾನದ ಮಾಡು ವುದಕ್ಕೆ ಪ್ರೌಢಶಾಲೆ ಮತ್ತು ಅದಕ್ಕಿಂತ ಮೇಲ್ಪಟ್ಟ ತರಗತಿಗಳಿಗೆ ಬೋಧನೆ ಮಾಡುತ್ತಿರುವವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರೌಢಶಾಲಾ ಶಿಕ್ಷಕರು, ಪಿಯುಕಾಲೇಜು ಉಪನ್ಯಾಸಕರು, ವಿಶ್ವವಿದ್ಯಾನಿಲಯ ಗಳಲ್ಲಿ ಬೋಧನೆ ಮಾಡುವ ಸಹ ಮತ್ತು ಸಹಾಯಕ ಪ್ರಾಧ್ಯಾಪಕರಿಗೆ ಮತದಾನದ ಅವಕಾಶವಿದೆ. ಆದರೆ, ಮಾಡುವುದಕ್ಕೆ ಶಿಕ್ಷಕರೇ ಎಂಬ ನಿಯಮವಿಲ್ಲದೆ ಇದ್ದು ವಿಧಾನಸಭೆಗೆ ಆಯ್ಕೆಯಾಗಲು ಇರುವ ಮಾನದಂಡಗಳು ಇದ್ದರೆ ಸಾಕು ಎಂಬಂತಾಗಿದೆ. ಸೋಜಿಗವೆಂದರೆ ಕನಿಷ್ಠ ಹತ್ತನೇ ತರಗತಿ ಉತ್ತೀರ್ಣರಾಗದವರೂ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿದ ಉದಾಹರಣೆ ಸಾಕಷ್ಟಿವೆ.
ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ರಾಜಕೀಯ ಪಕ್ಷದ ಟಿಕೆಟ್ ಪಡೆದು ಸ್ಪರ್ಧಿಸುತ್ತಿರುವುದು ಶಿಕ್ಷಕರ ಚುನಾವಣೆಯಲ್ಲೂ ಅನಿವಾರ್ಯವಾಗಿ ರಾಜಕಾರಣ ನುಸುಳುವಂತೆ ಮಾಡಿದೆ. ಇನ್ನು ಈ ಹುದ್ದೆ ರಾಜಕಾರಣಿಗಳಿಗೆ ಮೀಸಲಾಗಿದ್ದು, ಕೆಲವೊಂದುಕ್ಷೇತ್ರದಲ್ಲಿ ರಾಜಕೀಯ ಪ್ರಭಾವಿಗಳ ಪುನರ್ ವಸತಿ ಕೇಂದ್ರವಾಗಿ ಶಿಕ್ಷಕರ ಕ್ಷೇತ್ರ ಬದಲಾಗಿದೆ. ಪ್ರಚಲಿತ ಬೆಳವಣಿಗೆಗಳಿಂದ ಶಿಕ್ಷಣದ ಕ್ಷೇತ್ರದ ಮೇಲಾಗುತ್ತಿರುವ ಪರಿಣಾಮಗಳು, ಶಿಕ್ಷಣ ಕ್ಷೇತ್ರದಲ್ಲಿನ ತಲ್ಲಣಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಜ್ಞಾವಂತರು ಮೇಲ್ಮನೆ ಪ್ರವೇಶಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರೊಂದಿಗೆ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ರಾಜಕಾರಣ ಪ್ರವೇ ಶಿಸಿರುವ ಪರಿಣಾಮ, ರಾಜಕೀಯ ಮುಖಂಡರ ಸಭೆ ಸಮಾರಂಭ ವ್ಯಾಪಕವಾಗಿ ನಡೆಯುತ್ತಿವೆ. ಚುನಾವಣಾ ಆಯೋಗದ ನೀತಿ ಸಂಹಿತೆ ನಿಯಮದ ಪ್ರಕಾರ ಸರ್ಕಾರಿನೌಕರರು ಸಮಾರಂಭಗಳಲ್ಲಿ ಪಾಲ್ಗೊಳ್ಳುವಂಹಕ್ಕಿಯ ಆದರೆ, ಶಿಕ್ಷಕರೇ ಮತದಾರರಾಗಿರುವ ಈ ಚುನಾವಣೆಯಲ್ಲಿ ಶಿಕ್ಷಕರು ರಾಜಕೀಯ ಸಭೆ ಸಮಾರಂಭಗಳಿಗೆ ಪಾಲ್ಗೊಳ್ಳಬೇಕೋ, ಬೇಡವೋ ಎಂಬ ಜಿಜ್ಞಾಸೆ ಮೂಡಿಸಿದೆ. ಆ ಪಕ್ಷದ ಸಭೆಗೆ ಪಾಲ್ಗೊಂಡರೆ ಈ ಪಕ್ಷದವರು ಈ ಪಕ್ಷದ ಸಭೆಗೆ ಪಾಲ್ಗೊಂಡರೆ ಆ ಪಕ್ಷದವರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇರುವ ಕಾರಣ ಶಿಕ್ಷಕರು ಅತ್ತದರಿ ಇತ್ತ ಪುಲಿ ಎಂಬ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ.
ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರತಿಷ್ಠೆಯ ಅಖಾಡವಾಗಿ ಪರಿಣಮಿಸಿದೆ. ಪ್ರಮುಖ ಅಭ್ಯರ್ಥಿಗಳು ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಇತರೆ ಸಾಮಾನ್ಯ ಚುನಾವಣೆಗಳಿಗೆ ಕಡಿಮೆ ಇಲ್ಲದಂತೆ ಈ ಚುನಾವಣೆ ನಡೆಯುತ್ತಿದೆ. ಪಾರ್ಟಿಗಳು, ಗಿಫ್ಟ್‌ಗಳು ಸೇರಿದಂತೆ ಎಲ್ಲಾ ರೀತಿಯ ಚುನಾವಣಾ ತಂತ್ರಗಾರಿಕೆಗಳು ನಡೆಯುತ್ತಿದ್ದು ಪ್ರಸ್ತಾವಕರ ಕ್ಷೇತ್ರದ ಚುನಾವಣೆಯಲ್ಲಿ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿರುವುದನ್ನು ಕಂಡು ಹಿರಿಯ ಶಿಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ದೇಶದ ಪ್ರಗತಿಯಲ್ಲಿ ಶಿಕ್ಷಣ ಕ್ಷೇತ್ರದ ಪಾತ್ರ ಅಪಾರವಾಗಿದೆ. ಸರ್ಕಾರಿ ಶಾಲೆಗಳ ಸಮಸ್ಯೆ, ಕೆಪಿಎಸ್ ಶಾಲೆಗಳ ಬಗ್ಗೆ ಕೇಳಿ ಬರುತ್ತಿರುವ ಪರ, ವಿರೋಧ ಅಭಿಪ್ರಾಯಗಳು, ಶಿಕ್ಷಕರು, ಉಪ ನ್ಯಾಸಕರು ಮತ್ತು ಪ್ರಾಧ್ಯಾಪಕರ ಸಮಸ್ಯೆಗಳು ಹೀಗೆ ಸಾಕಷ್ಟು ಸವಾಲುಗಳಿದ್ದು, ಈ ಬಗ್ಗೆ ಮೇಲ್ಮನೆಯಲ್ಲಿ ಚರ್ಚೆ ಮಾಡುವುದಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಿದರೆ ಸೂಕ್ತವೆನಿಸುತ್ತದೆ. ಆದರೆ, ಇತ್ತೀಚಿನ ರಾಜಕೀಯ ಬೆಳವಣಿಗೆ ಯನ್ನು ನೋಡಿದರೆ ಅಂತಹ ಅವಕಾಶವೇ ಇಲ್ಲದಂತಾಗಿದೆ. ಶಿಕ್ಷಕರ ಜತೆಗೆ ಶಿಕ್ಷಣ ಕ್ಷೇತ್ರವನ್ನು ಸುಧಾರಿಸುವ ಪ್ರತಿನಿಧಿ ಆಯ್ಕೆಯಾಗುವ ವಾತಾವರಣ ಯಾವಾಗ ನಿರ್ಮಾಣವಾಗುತ್ತದೆ ಎಂಬುದು ಪ್ರಜ್ಞಾವಂತ ಜನರ ನಿರೀಕ್ಷೆಯಾಗಿದೆ.
ಈ ಶಿಕ್ಷಕ ಕ್ಷೇತ್ರದ ಚುನಾವಣೆಯ ಹೆಸರಿ ನಲ್ಲಿ ನಡೆಯುತ್ತಿರುವ ಕೆಲವೊಂದು ಬೆಳವಣಿಗೆ ನಿಜಕ್ಕೂ ಬೇಸರ ತರಿಸುತ್ತಿವೆ. ಸಂವಿಧಾನದ ಮೂಲ ಆಶಯ ಈಡೇರ ಬೇಕಾದರೆ ರಾಜಕೀಯ ರಹಿತವಾಗಿ ಈ ಚುನಾವಣೆಯನ್ನು ನಡೆಸಬೇಕು. ಆದರೆ, ಚುನಾವಣೆಯ ಹೆಸರಿನಲ್ಲಿ ನಡೆಯುವ ಬೆಳವಣಿಗೆ, ಆರೋಪ ಪ್ರತ್ಯಾರೋಪಗಳು ನಿಜಕ್ಕೂ ಬೇಸರ ತರುತ್ತದೆ. ಶಿಕ್ಷಕರ ಕ್ಷೇತ್ರಕ್ಕೆ ಮತದಾನ ಮಾಡಲು ಶಿಕ್ಷಕರೇ ಆಗಬೇಕು ಎನ್ನುವ ರೀತಿ ಸ್ಪರ್ಧೆ ಮಾಡುವುದಕ್ಕೂ ಶಿಕ್ಷಕರೇ ಬೇಕು ಎಂಬ ನಿಯಮ ಇದಿದ್ದರೆ ಚೆನ್ನಾಗಿರುತಿತ್ತು ಎಂದು ಶಿಕ್ಷಕರು ಅಭಿಪ್ರಾಯಪಡುತ್ತಾರೆ.



