October 14, 2026
Wednesday, October 14, 2026
spot_img

ಮಂಗಳೂರಿನ ಫುಡ್ ಟ್ರೆಂಡ್‌ಗೆ ಹೊಸ ಎಂಟ್ರಿ: 24×7 ಗ್ರಾಹಕರ ಸೇವೆಗೆ ಸಜ್ಜಾಗಿದೆ ‘ಕೆಫೆ ಡೆಮಿಸ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡೆಮಿಫುಡ್ಸ್ ಸಂಸ್ಥೆಯ ಉದ್ಯಮವಾದ ಕೆಫೆ ಡೆಮಿಸ್, ಬಂದರು ನಗರಿ ಮಂಗಳೂರಿಗೆ ಕಾಲಿಟ್ಟಿದ್ದು, ಇಲ್ಲಿನ ಕೆಫೆ ಸಂಸ್ಕೃತಿಗೆ ಹೊಸ ಆಯಾಮ ನೀಡಲು ಸಜ್ಜಾಗಿದೆ.

ಮಂಗಳೂರಿನ ಮೊದಲ 24 ಗಂಟೆಗಳ ಕೆಫೆ ಎಂದು ಪರಿಚಯಿಸಲಾಗಿರುವ ಈ ಕೆಫೆ ಈಗ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗ್ರಾಹಕರ ಸೇವೆಗೆ ತೆರೆದುಕೊಂಡಿದೆ. ಈ ಮೂಲಕ ಇಲ್ಲಿ ಪ್ರಯಾಣಿಕರು, ಉದ್ಯೋಗಿಗಳು, ನಗರವಾಸಿಗಳಿಗೆ ದಿನದ 24 ತಾಸು ಗುಣಮಟ್ಟದ ಆಹಾರ ಸವಿಯಲು ಈ ಕೆಫೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ನಾನು ಮಂಗಳೂರಿನಲ್ಲೇ ಬೆಳೆದವನು

ಕೆಫೆ ಡೆಮಿಸ್ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಸಂಸ್ಥಾಪಕ ರಾಜೇಶ್ ಮೆನೆಜಸ್, ಮಂಗಳೂರಿನಲ್ಲೇ ಬೆಳೆದವನಾದ ನನಗೆ ನನ್ನ ಊರಿನಲ್ಲಿ ಹೊಸ ರೀತಿಯ ಕೆಫೆ ಅನುಭವ ಪರಿಚಯಿಸುವ ಆಸೆ ಮೊದಲಿಂದಲೂ ಇತ್ತು. ಹಾಗಾಗಿ ಗ್ರಾಹಕರು ಯಾವುದೇ ಸಮಯದಲ್ಲಿ ಭೇಟಿ ನೀಡಬಹುದಾದ, ಉತ್ತಮ ಆಹಾರ ದೊರೆಯುವ ವಿಶ್ವಾಸಾರ್ಹ ಕೆಫೆ ನಿರ್ಮಿಸುವುದೇ ಕೆಫೆ ಡೆಮಿಸ್‌ನ ಹಿಂದಿನ ಆಲೋಚನೆ ಎಂದರು.

ಇಲ್ಲಿ ನೀಡುವ ಆಹಾರ ಮತ್ತು ಅದರ ಗುಣಮಟ್ಟಕ್ಕೆ ಹೆಚ್ಚು ಮಹತ್ವ ನೀಡುತ್ತೇವೆ. ಗುಣಮಟ್ಟದ ಪದಾರ್ಥಗಳು, ಪ್ರಾಮಾಣಿಕವಾದ ತಯಾರಿಕಾ ವಿಧಾನ, ಆರೋಗ್ಯಕರ ಆಹಾರವನ್ನು ನೀಡುವ ಬದ್ಧತೆ ನಮ್ಮದಾಗಿದೆ. ಮಂಗಳೂರಿಗೆ ವಿಭಿನ್ನ ಪರಿಕಲ್ಪನೆಯನ್ನು ಪರಿಚಯಿಸುವುದರ ಜೊತೆಗೆ, ಹಗಲು ಅಥವಾ ರಾತ್ರಿ ಯಾವುದೇ ಸಮಯದಲ್ಲಿ ಜನರು ಆತ್ಮೀಯವಾಗಿ ಸಮಯ ಕಳೆಯಬಹುದಾದ ಸ್ಥಳವನ್ನು ಲಭ್ಯವಾಗಿಸುವುದು ನಮ್ಮ ಆಶಯವಾಗಿದೆ ಎಂದು ಅವರು ಇದೇ ಸಂದರ್ಭ ಹೇಳಿದರು.

ದಿನದ 24 ಗಂಟೆಯೂ ಓಪನ್!

ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವುದರ ಜೊತೆಗೆ, ಮಂಗಳೂರಿನ ಎಲ್ಲರಿಗೂ ಆತ್ಮೀಯ ತಾಣವಾಗುವ ಗುರಿಯನ್ನು ಕೆಫೆ ಡೆಮಿಸ್ ಹೊಂದಿದ್ದು, ವಿಮಾನ ನಿಲ್ದಾಣದ ಸಮೀಪದಲ್ಲಿರುವುದು ಮತ್ತು ದಿನದ 24 ಗಂಟೆಯೂ ತೆರೆದಿರುವುದು ಇದರ ವಿಶೇಷತೆಗಳಾಗಿವೆ. ಮುಂಜಾನೆ ವಿಮಾನದಲ್ಲಿ ಪ್ರಯಾಣಿಸುವವರು, ತಡರಾತ್ರಿ ನಗರಕ್ಕೆ ಆಗಮಿಸುವವರು ಹಾಗೂ ಸಾಮಾನ್ಯ ಕೆಫೆಗಳು ಮುಚ್ಚಿರುವ ಸಮಯದಲ್ಲಿಯೂ ಸ್ನೇಹಿತರೊಂದಿಗೆ ಸಮಯ ಕಳೆಯಲು ಅಥವಾ ವಿಶ್ರಾಂತಿ ಪಡೆಯಲು ಬಯಸುವವರಿಗೆ ಇದು ಅನುಕೂಲವಾಗಲಿದೆ. ಜೊತೆಗೆ ಗುಣಮಟ್ಟದ ಕಾಫಿ, ಆತ್ಮೀಯ ವಾತಾವರಣ, ಒಟ್ಟಾಗಿ ಸಮಯ ಕಳೆಯಲು ಅವಕಾಶ ಕಲ್ಪಿಸುವುದು ಕೂಡಾ ಕೆಫೆ ಡೆಮಿಸ್‌ನ ಪರಿಕಲ್ಪನೆಯಾಗಿದೆ.

ಕಾಫಿ, ಆಹಾರ ಮತ್ತು ಜನರ ನಡುವಿನ ಆತ್ಮೀಯತೆಯನ್ನು ಒಂದೇ ಸ್ಥಳದಲ್ಲಿ ಒಗ್ಗೂಡಿಸುವ ಮೂಲಕ, ಭಾರತದ ಬೆಳೆಯುತ್ತಿರುವ ಕೆಫೆ ಸಂಸ್ಕೃತಿಯಲ್ಲಿ ತನ್ನದೇ ಆದ ಗುರುತನ್ನು ಮೂಡಿಸಲು ಕೆಫೆ ಡೆಮಿಸ್ ಈ ಮೂಲಕ ಮುಂದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕೆಫೆ ಡೆಮಿಸ್‌ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆ @cafedemis.in ಅನ್ನು ಫಾಲೋ ಮಾಡಬಹುದು ಎಂದು ಸಂಸ್ಥೆ ಹೇಳಿದೆ.

Must Read