ರಾತ್ರೋ ರಾತ್ರಿ ಪಾಕಿಸ್ತಾನದಲ್ಲಿ 150 ವರ್ಷ ಹಳೆಯ ಹಿಂದು ದೇವಾಲಯ ನೆಲಸಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪಾಕಿಸ್ತಾನದಲ್ಲಿ 150 ವರ್ಷಗಳಷ್ಟು ಹಳೆಯದಾದ ಮಾರಿ ಮಾತಾ ಹಿಂದು ದೇವಾಲಯವನ್ನು (Hindu Temple) ನೆಲಸಮಗೊಳಿಸಲಾಗಿದೆ.

ಇಲ್ಲಿನ (Pakistan) ಕರಾಚಿಯ (Karachi) ಸೋಲ್ಜರ್ ಬಜಾರ್‌ನಲ್ಲಿದ್ದ ಹಿಂದು ದೇವಾಲಯವನ್ನು ಶುಕ್ರವಾರ ತಡರಾತ್ರಿ ಈವಿದ್ಯುತ್ ಇಲ್ಲದ ಸಂದರ್ಭದಲ್ಲಿ ನೆಲಸಮ ಕಾರ್ಯಾಚರಣೆ ನಡೆದಿದೆ. ಬುಲ್ಡೋಜರ್‌ ಬಳಸಿ ರಾತ್ರಿಯೆಲ್ಲಾ ಕಾರ್ಯಾಚರಣೆ ನಡೆಸಿ ಹೊರಗಿನ ಗೋಡೆಗಳು ಮತ್ತು ಮುಖ್ಯ ಗೇಟ್ ಅನ್ನು ಹಾಗೆಯೇ ಬಿಟ್ಟು, ಒಳಗಿನ ದೇವಾಲಯದ ಸಂಪೂರ್ಣ ರಚನೆಯನ್ನು ಕೆಡವಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಸೋಲ್ಜರ್ ಬಜಾರ್ ಪೊಲೀಸ್ ಠಾಣೆಗೆ ಬಹಳ ಹತ್ತಿರದಲ್ಲಿದ್ದರೂ ಏನು ತಿಳಿಯದೆ ರೀತಿ ಇದ್ದರು. ಜೊತೆಗೆ . ಬುಲ್ಡೋಜರ್‌ನಿಂದ ದೇವಸ್ಥಾನ ಕೆಡವುತ್ತಿದ್ದ ವ್ಯಕ್ತಿಗಳಿಗೆ ಪೊಲೀಸರು ವ್ಯಾನ್‌ಗಳಲ್ಲಿ ಬಂದು ರಕ್ಷಣೆ ನೀಡಿದ್ದರು ಎಂದು ಸ್ಥಳೀಯ ಪತ್ರಿಕೆ ಮಾಡಿದೆ.

ಈ ದೇವಾಲಯವನ್ನು ಇದನ್ನು 150 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಅದರ ಅಂಗಳದಲ್ಲಿ ಹೂತಿಟ್ಟಿರುವ ಹಳೆಯ ನಿಧಿಗಳ ಬಗ್ಗೆ ನಾವು ಕಥೆಗಳನ್ನು ಕೇಳಿದ್ದೇವೆ. ಕೆಲವು ಸಮಯದಿಂದ ಅದರ ಮೇಲೆ ಕಣ್ಣಿಟ್ಟಿದ್ದವು ಈ ಕೆಲಸ ಮಾಡಿರಬಹುದು ಎಂದು ಸ್ಥಳೀಯರಾದ ಶ್ರೀರಾಮ್ ನಾಥ್ ಮಿಶ್ರ ಮಹಾರಾಜ್ ದೂರಿದ್ದಾರೆ.

ಮಂದಿರವು ಕರಾಚಿಯ ಮದ್ರಾಸಿ ಹಿಂದು ಸಮುದಾಯದ ನಿರ್ವಹಣೆಯಲ್ಲಿತ್ತು. ಇದು ಅತ್ಯಂತ ಹಳೆಯ ದೇವಾಲಯವಾಗಿದ್ದರಿಂದ ಸ್ವಲ್ಪ ಶಿಥಿಲಾವಸ್ತೆಗೊಂಡಿತ್ತು. ದೇವಾಲಯ ನವೀಕರಣಕ್ಕಾಗಿ ಅಲ್ಲಿದ್ದ ಹಿಂದೂ ದೇವರ ವಿಗ್ರಹಗಳನ್ನು ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರಿಸಲಾಗಿತ್ತು. ಆದರೆ ನಿನ್ನೆ ರಾತ್ರಿ ಮಾರಿ ಮಾತಾ ದೇವಾಲಯವನ್ನು ಕೆಡವಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪಾಕಿಸ್ತಾನ-ಹಿಂದೂ ಕೌನ್ಸಿಲ್, ಮುಖ್ಯಮಂತ್ರಿ ಸೈಯದ್ ಮುರಾದ್ ಅಲಿ ಶಾ ಮತ್ತು ಸಿಂಧ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್‌ಗೆ ಮದ್ರಾಸಿ ಹಿಂದು ಸಮುದಾಯ ದೂರು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!