ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಮಧುರೈನಲ್ಲಿ ಮ್ಯಾರನಾಥ್‌ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಕಲ್ಲಕುರಿಚಿಯ ದಿನೇಶ್ ಕುಮಾರ್‌ಗೆ ಬರೀ 20 ವರ್ಷ, ಅವರು ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದು, ಸಂಪೂರ್ಣವಾಗಿ ರನ್ ಮುಗಿಸಿದ್ದರು.
ಅದಾದ ನಂತರ ಆರೋಗ್ಯವಾಗಿಯೇ ಇದ್ದರು. ಇದಾಗ ಒಂದು ಗಂಟೆ ನಂತರ ಇದ್ದಕ್ಕಿದ್ದಂತೆಯೇ ಮೂರ್ಛೆ ಹೋಗಿದ್ದಾರೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.