ತರಗತಿಯಲ್ಲೇ ಶಿಕ್ಷಕಿಗೆ ಗುಂಡು ಹಾರಿಸಿದ 6 ವರ್ಷದ ಬಾಲಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕಾದ ವರ್ಜೀನಿಯಾದಲ್ಲಿ 6 ವರ್ಷದ ಬಾಲಕ ತರಗತಿಯಲ್ಲೇ ತನ್ನ ಶಿಕ್ಷಕಿಗೆ ಗುಂಡು ಹಾರಿಸಿದ್ದು ಘಟನೆಯಲ್ಲಿ ನಡೆದಿದೆ .

ಇಲ್ಲಿನ ರಿಚ್ನೆಕ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಗೆ ಬಾಲಕ ಗುಂಡು ಹರಿಸಿದ್ದು, ಗಾಯಗೊಂಡಿದ್ದಾರೆ. ಆದ್ರೆ ದಾಳಿಯಲ್ಲಿ ಯಾವುದೇ ವಿದ್ಯಾರ್ಥಿಗಳು ಗಾಯಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ನ್ಯೂಪೋರ್ಟ್ ನ್ಯೂಸ್ ನಗರದ ಪೊಲೀಸರು ಮತ್ತು ಶಾಲಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

30 ವರ್ಷದ ಶಿಕ್ಷಕಿಗೆ ಮಾರಣಾಂತಿಕ ಗಾಯಗಳಾಗಿದ್ದು ಆಕೆಯ ಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದೆ ಎಂದು ನ್ಯೂಪೋರ್ಟ್ ನ್ಯೂಸ್ ಪೊಲೀಸ್ ಮುಖ್ಯಸ್ಥ ಸ್ಟೀವ್ ಡ್ರೂ ಹೇಳಿದ್ದಾರೆ.

ಶಿಕ್ಷಕಿಗೆ ಬಿದ್ದ ಗುಂಡೇಟು ಆಕಸ್ಮಿಕವಲ್ಲ ಎಂದು ಡ್ರೂ ಹೇಳಿದರು. ತರಗತಿಯ ವ್ಯವಸ್ಥೆಯಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರು ಪರಸ್ಪರ ಪರಿಚಿತರಾಗಿದ್ದರು.

ತರಗತಿಯಲ್ಲಿ ಬಾಲಕ ಕೈಬಂದೂಕನ್ನು ಹೊಂದಿದ್ದನು, ಅದನ್ನು ಆತ ಎಲ್ಲಿ ಪಡೆದುಕೊಂಡರು ಎಂಬುದನ್ನು ತನಿಖಾಧಿಕಾರಿಗಳು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!