ಹೊಸದಿಗಂತ ವರದಿ,ಚಿಕ್ಕಬಳ್ಳಾಪುರ:
ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಚಿಕ್ಕಬಳ್ಳಾಪುರದಲ್ಲಿ 65 ವರ್ಷ ವಯಸ್ಸಿನ ವ್ಯಕ್ತಿ 30 ವರ್ಷದ ಯುವತಿಯನ್ನು ಮದುವೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಅಪರೂಪದ ಜೋಡಿ ಜಿಲ್ಲೆಯ ಶಿಡ್ಲಘಟ್ಟದ ಅಪ್ಪೇಗೌಡನಹಳ್ಳಿ ಗೇಟ್ನ ಬಯಲಾಂಜನೇಯ ಸ್ವಾಮಿ ದೇವಾಲಯದ ಬಳಿ ಮದುವೆಯಾಗಿದ್ದಾರೆ. ಈರಣ್ಣ ಹಾಗೂ ಅನು ಮದುವೆಯಾಗಿರುವ ನವ ದಂಪತಿಯಾಗಿದ್ದಾರೆ.
ಆರು ತಿಂಗಳ ಹಿಂದೆ ಈರಣ್ಣ ಅವರ ಪತ್ನಿ ತೀರಿಕೊಂಡಿದ್ದರು. ಇದರಿಂದ ಅವರು ಮರು ಮದುವೆಯಾಗಿದ್ದಾರೆ. ವಿಶೇಷ ದಂಪತಿಗೆ ಗ್ರಾಮಸ್ಥರು ಶುಭ ಹಾರೈಸಿದ್ದಾರೆ