ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಮನೆಯಲ್ಲಿ ಯಾರೂ ಯಾರ ಮೇಲೆಯೂ ಹಲ್ಲೆ ಮಾಡುವಂತಿಲ್ಲ. ಈ ರೀತಿ ಮಾಡಿದರೆ ಆ ಸ್ಪರ್ಧಿಯನ್ನು ಕೂಡಲೇ ಎಲಿಮಿನೇಟ್ ಮಾಡಲಾಗುತ್ತದೆ. ಇದು ಮನೆಯ ಮೂಲ ನಿಯಮ.
ಹಿಂದಿ ಬಿಗ್‌ಬಾಸ್‌ನಲ್ಲಿ ಈ ಮೂಲ ನಿಯಮ ಬ್ರೇಕ್ ಆಗಿದ್ದು, ಸ್ಪರ್ಧಿಯೊಬ್ಬರನ್ನು ಎಲಿಮಿನೇಟ್ ಮಾಡಲಾಗಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಭಿಷೇಕ್ ಕುಮಾರ್ ಹಾಗೂ ಸಮರ್ಥ್ ಜ್ಯುರೆಲ್ ನಡುವೆ ಫೈಟ್ ನಡೆದಿದ್ದು, ಅಭಿಷೇಕ್ ಸಮರ್ಥ್ ಕೆನ್ನೆಗೆ ಬಾರಿಸಿದ್ದಾರೆ. ಇದರಿಂದಾಗಿ ತಕ್ಷಣವೇ ಅವರನ್ನು ಮನೆಯಿಂದ ಹೊರಕ್ಕೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಬಿಗ್‌ಬಾಸ್ ಕ್ಯಾಪ್ಟನ್ ಅಂಕಿತಾಗೆ ಅಭಿಷೇಕ್ ಮನೆಯಲ್ಲಿ ಇರಬೇಕೋ ಬೇಡವೋ ಎಂದು ಬಿಗ್‌ಬಾಸ್ ಕೇಳಿದ್ದು, ಅಂಕಿತಾ ಅಭಿಷೇಕ್ ಮನೆಯಿಂದ ಹೊರಹೋಗಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.