ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತಿ ಕೆಂಪು ಬಣ್ಣದ ಲಿಪ್ ಸ್ಟಿಕ್ ತಂದಿದ್ದಕ್ಕೆ ಕೋಪಗೊಂಡ ಮಹಿಳೆ ಕೋರ್ಟ್ ಮೆಟ್ಟಿಲೇರಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಮದುವೆಯಾದ ಕೇವಲ ಆರು ತಿಂಗಳ ನಂತರ, ಪತಿಗೆ ವಿಚ್ಛೇದನ ನೀಡಲು ಪತ್ನಿ ನಿರ್ಧರಿಸಿದ್ದಾರೆ.
ವಿಚ್ಛೇದನಕ್ಕೆ ಕಾರಣವೇನು ಎಂದು ವಕೀಲರು ಕೇಳಿದಾಗ, ಮಹಿಳೆ ಲಿಪ್ಸ್ಟಿಕ್ ವಿವಾದವನ್ನು ವಿವರಿಸಿದರು. ಇವರ ಜಗಳದ ವಿಚಾರ ತಿಳಿದು ಕೌಟುಂಬಿಕ ಸಲಹಾ ಕೇಂದ್ರದ ನೌಕರರು ಬೆಚ್ಚಿಬಿದ್ದರು.
ಕೌಟುಂಬಿಕ ಸಲಹಾ ಕೇಂದ್ರದ ಸಲಹೆಗಾರ ಡಾ.ಸತೀಶ್ ಖಿರ್ವಾರ್ ಮಾತನಾಡಿ, ಆರು ತಿಂಗಳ ಹಿಂದೆ ಆಗ್ರಾದ ಯುವತಿಯೊಬ್ಬಳು ಮಥುರಾದ ಯುವಕನನ್ನು ಮದುವೆಯಾಗಿದ್ದಳು. 20 ದಿನಗಳ ಹಿಂದೆ ತನ್ನ ಪತಿಗೆ ಕೆಂಪು ಲಿಪ್ ಸ್ಟಿಕ್ ತರುವಂತೆ ಹೇಳಿದ್ದಳು. ಆದರೆ ಗೊತ್ತಿಲ್ಲದೇ ಮರೂನ್ ಲಿಪ್ ಸ್ಟಿಕ್ ತಂದಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ತಂದಿರೋ ಲಿಪ್ ಸ್ಟಿಕ್ ಬದಲಾಯಿಸಿ ಬಾ ಎಂದು ಕೇಳುತ್ತಾಳೆ. ಆದರೆ ಪತಿ, ಬಣ್ಣದಲ್ಲಿ ಹೆಚ್ಚು ವ್ಯತ್ಯಾಸವಿಲ್ಲ ಎಂದು ಹೇಳಿದ್ದಾನೆ. ಕೋಪಗೊಂಡ ಹೆಂಡತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಸಿದ್ಧಳಾಗಿದ್ದಾಳೆ ಎಂದು ಅವರು ಹೇಳಿದರು.