ಅವಳಿ ಸಹೋದರಿಯರನ್ನು ಮದುವೆಯಾದ ವರನಿಗೆ ಖುಷಿಯ ನಡುವೆ ಕಾದಿತ್ತು ಬಿಗ್ ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲೂಕಿನ ಅಕ್ಲುಜ್‌ನಲ್ಲಿ ಅವಳಿ ಸಹೋದರಿಯರಿಬ್ಬರು ಒಬ್ಬನೇ ವ್ಯಕ್ತಿಯನ್ನು ಮದುವೆಯಾದ ವಿಚಾರ ಎಲ್ಲೆಡೆ ಸುದ್ದಿಯಾಗಿತ್ತು. ಇದೀಗ ಮದುವೆಯ ಖುಷಿಯಲ್ಲಿದ್ದ ವರನಿಗೆ ಜೈಲಿನ ಭೀತಿ ಎದುರಾಗಿದೆ.

ಅವಳಿ ಸಹೋದರಿಯರನ್ನ ವರಿಸಿದ್ದ ಅತುಲ್ ಉತ್ತಮ್ ಔತಾಡೆ ಮದುವೆ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು, ಅತುಲ್ ವಿರುದ್ಧ ದ್ವಿಪತ್ನಿತ್ವದ ಆರೋಪ ಹೊರಿಸಲಾಗಿದೆ. ಏಕೆಂದರೆ ಇದು ಕಾನೂನುಬಾಹಿರವಾಗಿದ್ದು, 7 ವರ್ಷ ಶಿಕ್ಷೆಗೆ ಗುರಿಯಾಗಬಹುದು. ಅತುಲ್ ವಿರುದ್ಧ ಐಪಿಸಿ ಸೆಕ್ಷನ್ 494 (ಸಂಗಾತಿ ಜೀವಂತವಾಗಿರುವಾಗ ಮತ್ತೆ ಮದುವೆಯಾಗುವುದು) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಶಿರೀಶ್ ಸರ್ದೇಶಪಾಂಡೆ ತಿಳಿಸಿದ್ದಾರೆ.

ಇನ್ನು ರಾಷ್ಟ್ರೀಯ ಮಹಿಳಾ ಆಯೋಗಮತ್ತು ಮಹಾರಾಷ್ಟ್ರ ಮಹಿಳಾ ಸಂಘ ಸಂಸ್ಥೆಗಳು ಕೂಡ ಮೂವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!