ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೊಮ್ಮೆ ಸಣ್ಣ ಜೀವಿಗಳು ಸೇರಿದತೆ ವಿಷಕಾರಿ ಬೃಹತ್ ಹಾವುಗಳೂ ಮನೆ ಹೊಕ್ಕುತ್ತವೆ. ಬಯಲು ಪ್ರದೇಶ, ಕಾಡಂಚಿನ ಹಳ್ಳಿಗಳಲ್ಲಿ ಈ ಸಮಸ್ಯೆ ತುಂಬಾ ಹೆಚ್ಚು. ಇಂತಹ ಘಟನೆಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೀಗ ದೈತ್ಯ ಹೆಬ್ಬಾವಿನ ವಿಡಿಯೋವೊಂದು ಹರಿದಾಡುತ್ತಿದೆ.
ಮುಂಬೈ ಥಾಣೆಯ ಸ್ಥಳೀಯ ಕಟ್ಟಡವೊಂದರಲ್ಲಿ ಆಘಾತಕಾರಿ ಘಟನೆ ನಡೆದಿದೆ. ಅಲ್ಲಿದ್ದ ಅಪಾರ್ಟ್ ಮೆಂಟ್ ಗೆ ನುಗ್ಗಲು ಯತ್ನಿಸಿದ ಹೆಬ್ಬಾವು ಸಾಧ್ಯವಾಗದೆ ಕಿಟಕಿಗೆ ಸಿಲುಕಿ ಒದ್ದಾಡಿದೆ. ಸುಮಾರು 10 ಅಡಿ ಉದ್ದ, ಭಾರವಾಗಿರುವ ಹಾವು ಮನೆಯೊಳಗೆ ಪ್ರವೇಶಲಾಗದೆ ಕಿಟಕಿಗೆ ಸಿಲುಕಿತು.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಉರಗ ತಜ್ಞರು ಬಹಳ ಹೊತ್ತು ಶ್ರಮಿಸಿ ಹೆಬ್ಬಾವನ್ನು ಉಳಿಸಿದರು. ಹೆಬ್ಬಾವು ವಿಷಕಾರಿಯಲ್ಲದ ಅಲ್ಬಿನೋ ಬರ್ಮೀಸ್ ಜಾತಿಗೆ ಸೇರಿದ್ದು ಎಂದು ಅವರು ಹೇಳಿದರು. ಅಕಸ್ಮಾತ್ ಕಾಡುಪ್ರಾಣಿಗಳು ಮನೆಗೆ ನುಗ್ಗಿದರೆ ಅವುಗಳನ್ನು ಸಾಯಿಸದೆ ಕೂಡಲೇ ಮಾಹಿತಿ ನೀಡುವಂತೆ ತಿಳಿಸಿದರು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ಭಾರೀ ಗಾತ್ರದ ಹಾವನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
A huge snake was spotted at a Thane Building, it was rescued by two brave persons, rescue video. 👇. #thane #mumbai pic.twitter.com/j2ZWrs9mR9
— Sneha (@QueenofThane) September 25, 2023