ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾರುಖ್ ಜನ್ಮದಿನದಂದು ಜವಾನ್ ಚಿತ್ರತಂಡದಿಂದ ಬಿಗ್ ಸರ್ಪೈಸ್ ಸಿಕ್ಕಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಜವಾನ್ ರಿಲೀಸ್ ಆಗಲಿದೆ.
ಈವರೆಗೂ ಜವಾನ್ 1103.27 ಕೋಟಿ ರೂಪಾಯಿ ಕಮಾಯಿ ಮಾಡಿದೆ. ವಿಶ್ವದಾದ್ಯಂತ ಭರ್ಜರಿ ದಾಖಲೆ ಸೃಷ್ಟಿಸಿದ ಏಕೈಕ ಸಿನಿಮಾ ಜವಾನ್ ಆಗಿದೆ. ಭಾರತದಲ್ಲೇ ಜವಾನ್ 600 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಇಷ್ಟು ದಾಖಲೆ ಮೊತ್ತ ಗಳಿಸಿದ ಮೊದಲ ಹಿಂದಿ ಸಿನಿಮಾ ಇದಾಗಿದೆ.
ಇದರ ಜೊತೆಗೆ ನಿರ್ದೇಶಕ ಅಟ್ಲೀ ಮತ್ತೊಂದು ಸರ್ಪೈಸ್ ನೀಡಿದ್ದು, ಜವಾನ್-2 ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.