Monday, December 11, 2023

Latest Posts

ವಿಚಾರಣೆಗೆ ಕೇಜ್ರಿವಾಲ್‌ ಗೈರು: ಸಮನ್ಸ್‌ ಹಿಂಪಡೆಯುವಂತೆ ಇಡಿಗೆ ಪತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಗೈರಾಗಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಕೇಂದ್ರ ತನಿಖಾ ಸಂಸ್ಥೆಯ ದೆಹಲಿ ಕಚೇರಿಯ ಮುಂದೆ ಹಾಜರಾಗಬೇಕಿತ್ತು, ಆದರೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಪತ್ರ ಬರೆದ ಕೇಜ್ರಿವಾಲ್, ಸಮನ್ಸ್ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಇದು “ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ” ಎಂದು ಪತ್ರದಲ್ಲಿ ಬರೆದಿದ್ದಾರೆ.

ʻಎಎಪಿಯ ರಾಷ್ಟ್ರೀಯ ಸಂಚಾಲಕ ಮತ್ತು ಸ್ಟಾರ್ ಪ್ರಚಾರಕನಾಗಿರುವುದರಿಂದ, ಪ್ರಚಾರಕ್ಕಾಗಿ ಮತ್ತು ಆಪ್‌ನ ನನ್ನ ಕ್ಷೇತ್ರದ ಕಾರ್ಯಕರ್ತರಿಗೆ ರಾಜಕೀಯ ಮಾರ್ಗದರ್ಶನ ನೀಡಲು ಮಧ್ಯಪ್ರದೇಶಕ್ಕೆ ಪ್ರಯಾಣಿಸಬೇಕಾಗಿದೆ. ದೆಹಲಿ ಸಿಎಂ ಆಗಿ, ನಾನು ನನ್ನ ಉಪಸ್ಥಿತಿಯ ಅಗತ್ಯವಿರುವ ಆಡಳಿತ ಮತ್ತು ಅಧಿಕೃತ ಬದ್ಧತೆಗಳನ್ನು ಹೊಂದಿದ್ದೇನೆ. ನನಗೆ ನೀಡಿರುವ ಸಮನ್ಸ್‌ ಅಸ್ಪಷ್ಟ ಮತ್ತು ರಾಜಕೀಯ ಪ್ರೇರಿತ. ತಕ್ಷಣವೇ ನೋಟಿಸ್‌ ಹಿಂಪಡೆಯುವಂತೆ ಎರಡು ಪುಟಗಳ ಪತ್ರದಲ್ಲಿ ಕೇಜ್ರಿವಾಲ್‌ ಉಲ್ಲೇಖಿಸಿದ್ದಾರೆ.

Image

Image

ಇಡಿ ನೀಡಿರುವ ನೋಟಿಸ್‌ಗೆ ಉತ್ತರಿಸದೇ ಆಮ್ ಆದ್ಮಿ ಪಕ್ಷದ (ಎಎಪಿ) ಪ್ರಚಾರಕ್ಕಾಗಿ ಮಧ್ಯಪ್ರದೇಶಕ್ಕೆ ತೆರಳುತ್ತಿರುವ ದೆಹಲಿ ಸಿಎಂ ಕೇಜ್ರಿವಾಲ್‌ಗೆ ಇಡಿ ಹೊಸ ಸಮನ್ಸ್ ನೀಡುವ ಸಾಧ್ಯತೆಯಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!