ಒಂದೇ ಭಾರತ್ ರೈಲಿಗೆ ಚಾಲನೆ ನೀಡುವ ವೇಳೆ ಆಯತಪ್ಪಿ ಹಳಿ ಮೇಲೆ ಬಿದ್ದ ಬಿಜೆಪಿ ಶಾಸಕಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಒಂದೇ ಭಾರತ್ ರೈಲಿಗೆ ಚಾಲನೆ ನೀಡುವ ವೇಳೆ ಬಿಜೆಪಿ ಶಾಸಕಿ ಆಯತಪ್ಪಿ ಹಳಿ ಮೇಲೆ ಬಿದ್ದ ಘಟನೆ ಮಂಗಳವಾರ ಉತ್ತರ ಪ್ರದೇಶದಲ್ಲಿ ನಡೆದಿದೆ.

ಆಗ್ರಾ ಮತ್ತು ವಾರಣಾಸಿ ನಡುವೆ ಆರಂಭವಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇಟಾವಾ ರೈಲು ನಿಲ್ದಾಣವನ್ನು ತಲುಪಿದ್ದು, ಬಿಜೆಪಿ ಮತ್ತು ಎಸ್‌ಪಿ ನಾಯಕರು ತಮ್ಮ ಬೆಂಬಲಿಗರೊಂದಿಗೆ ಅದನ್ನು ರೈಲನ್ನು ಸ್ವಾಗತಿಸಿದರು.

ಈ ವೇಳೆ ನಿಲ್ದಾಣದಲ್ಲಿ ಜನಜಂಗುಳಿ ಹೆಚ್ಚಿದ್ದು, ರೈಲಿಗೆ ಧ್ವಜಾರೋಹಣ ಮಾಡಲು ಮುಖಂಡರ ನಡುವೆ ಹಾಗೂ ಛಾಯಾಚಿತ್ರ ತೆಗೆಯಲು ಬೆಂಬಲಿಗರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಈ ವೇಳೆ ನೂಕು-ನುಗ್ಗಲು ಏರ್ಪಟ್ಟಿದ್ದು, ಇದರಿಂದಾಗಿ ಇಟವಾಹ್‌ನ ಬಿಜೆಪಿ ಶಾಸಕ ಸದರ್ ಸರಿತಾ ಬದೌರಿಯಾ ಅವರು ಆಯತಪ್ಪಿ ಪ್ಲಾಟ್‌ಫಾರ್ಮ್‌ನಿಂದ ಕೆಳಗಿನ ರೈಲ್ವೆ ಹಳಿ ಮೇಲೆ ಬಿದ್ದಿದ್ದಾರೆ.

ಶಾಸಕಿ ಸರಿತಾ ಬದೌರಿಯಾ ಅವರು ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಲು, ಇಟಾವಾ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ಗೆ ಆಗಮಿಸಿದ್ದರು. ವಂದೇ ಭಾರತ್ ಧ್ವಜಾರೋಹಣ ಮಾಡಲು ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದರು, ಈ ವೇಳೆ ಗಲಾಟೆ ನಡೆದು ಸರಿತಾ ಬದೌರಿಯಾ ಕಾಲು ಜಾರಿ ರೈಲ್ವೇ ಹಳಿ ಮೇಲೆ ಬಿದ್ದಿದ್ದಾರೆ. ಈ ವೇಳೆ ರೈಲು ಇಟಾವಾ ಪ್ಲಾಟ್‌ಫಾರ್ಮ್ ನಂಬರ್ ಒಂದರಲ್ಲಿ ನಿಂತಿತ್ತು.

ಬಿಜೆಪಿ ಮಹಿಳಾ ಶಾಸಕಿ ಹಳಿ ಮೇಲೆ ಬಿದ್ದ ತಕ್ಷಣ ರೈಲಿನ ಲೋಕೋ ಪೈಲಟ್ ಹಾರ್ನ್ ಊದಿದರು. ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಇತರ ಮುಖಂಡರು ರೈಲನ್ನು ಮುಂದೆ ಸಾಗದಂತೆ ನಿಲ್ಲಿಸುವಂತೆ ಸೂಚಿಸಿದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!