ರಾಜ್ಯ ಕಾಂಗ್ರೆಸ್ ಗೆ ಹೊಡೆತ: ತೆನೆ ಹಿಡಿದ ಮಾಜಿ ಶಾಸಕ ನಿಂಗಪ್ಪ

ಹೊಸದಿಗಂತ ಡಿಜಿಟಲ್ ಡೆಸ್ಕ್‌: 

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಗೆ ಒಂದರ ಮೇಲೊಂದು ಹೊಡೆತ ಬೀಳುತ್ತಿದ್ದು, ತುಮಕೂರಿನ ಮಾಜಿ ಶಾಸಕ ನಿಂಗಪ್ಪ (H Ningappa) ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಪಕ್ಷದ ಬಾವುಟ ನೀಡಿ ನಿಂಗಪ್ಪ ಅವರಿಗೆ ಸ್ವಾಗತ ಕೋರಿದರು.

ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ನಿಂಗಪ್ಪ ಅವರು ನಮ್ಮ ಹಿರಿಯ ನಾಯಕರು. ಈ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದ್ದರು. ಅವರ ನಿಷ್ಠೆಗೆ ನಮ್ಮಿಂದಲ್ಲೆ ಸ್ವಲ್ಪ ಸಮಸ್ಯೆ ಆಗಿತ್ತು. ಅವರು ಮರಳಿ ಮನೆಗೆ ವಾಪಸ್ ಆಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ತುಮಕೂರಿನಲ್ಲಿ (Tumkur) ಪಕ್ಷ ಕಟ್ಟಿದವರು ನಿಂಗಪ್ಪ ಅವರು 2004ರಲ್ಲಿ ಶಾಸಕರಾಗಿ ಕುಣಿಗಲ್ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದರು. ಆ ಭಾಗದ ರೈತರ ಬದುಕಿಗೆ ಹಸಿರಿನ ಬದುಕು ಕೊಟ್ಟವರು. 2008ರ ನಂತರ ನಮ್ಮಲ್ಲಿ ಸ್ವಲ್ಪ ಗೊಂದಲದಿಂದ ಅವರಿಗೆ ನೋವಾಗಿತ್ತು. ಅವರು ಬೇರೆ ಪಕ್ಷದಲ್ಲಿ ಇದ್ದರೂ ಮನಸು ಇಲ್ಲೇ ಇತ್ತು. 2018 ರಲ್ಲಿ ಚುನಾವಣೆ ವೇಳೆಯೂ ಅವರ ಮನೆಗೆ ಹೋಗಿದ್ದೆ. ಅವರು ಯಾವತ್ತಿಗೂ ಷರತ್ತುಗಳನ್ನು ಹಾಕದೇ ಕೆಲಸ ಮಾಡಿದ್ದಾರೆ ಎಂದು ಹೊಗಳಿದರು.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!