Saturday, August 13, 2022

Latest Posts

ಭಾರತದಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಯಿತು ಹೊಚ್ಚ ಹೊಸ ರಕ್ತದ ಗುಂಪು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದಲ್ಲಿ ಇದೇ ಮೊದಲ ಬಾರಿಗೆ ಹೊಚ್ಚ ಹೊಸ ರಕ್ತದ ಗುಂಪು ಪತ್ತೆಯಾಗಿದೆ. ವಿಶ್ವದಲ್ಲೇ ಅಪರೂಪವಾಗಿರುವ EMM ನೆಗೆಟಿವ್ ರಕ್ತದ ಗುಂಪು ಗುಜರಾತಿನ 65 ವರ್ಷದ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿದೆ.
ಹೌದು,
ಗುಜರಾತಿನ 65 ವರ್ಷದ ಇವರು ಹೃದಯಾಘಾತದಿಂದ ಅಹಮದಾಬಾದ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೃದ್ರೋಗಿಗೆ ಶಸ್ತ್ರಚಿಕಿತ್ಸೆಗಾಗಿ ರಕ್ತದ ಅವಶ್ಯಕತೆ ಇದೆ ಎಂದು ಸೂರತ್‌ನ ಸಮರ್ಪಣ್ ರಕ್ತದಾನ ಕೇಂದ್ರದ ವೈದ್ಯ ಸನ್ಮುಖ್ ಜೋಶಿ ಹೇಳಿದ್ದರು.
ಆದರೆ ಅಹಮದಾಬಾದ್‌ನ ಪ್ರಯೋಗಾಲಯದಲ್ಲಿ ಅವರ ರಕ್ತದ ಗುಂಪು ಯಾವುದು ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗಲೇ ಇಲ್ಲ. ನಂತರ ರಕ್ತದ ಮಾದರಿಯನ್ನು ಸೂರತ್‌ನಲ್ಲಿರುವ ರಕ್ತದಾನ ಕೇಂದ್ರಕ್ಕೆ ಕಳುಹಿಸಲಾಯಿತು. ಆದರೆ ಪಆ ಮಾದರಿಯು ಯಾವುದೇ ಗುಂಪಿನೊಂದಿಗೆ ಹೊಂದಿಕೆಯಾಗಲಿಲ್ಲ. ಬಳಿಕ ಅವರ ರಕ್ತದ ಸ್ಯಾಂಪಲ್‌ ಅನ್ನು ಅವರ ಸಂಬಂಧಿಕರು ಅಮೆರಿಕಕ್ಕೆ ಕೊಂಡೊಯ್ದು ಪರೀಕ್ಷಿಸಿದ್ದಾರೆ.ಆ ವೇಳೆ ಇವರದ್ದು EMM ನೆಗೆಟಿವ್ ರಕ್ತದ ಗುಂಪು ಎಂಬುದು ದೃಢಪಟ್ಟಿದೆ.
ಈ ಅಪರೂಪದ ರಕ್ತದ ಗುಂಪನ್ನು ಹೊಂದಿರುವ ಭಾರತದ ಮೊದಲ ವ್ಯಕ್ತಿ ಇವರು. ವಿಶ್ವದಲ್ಲಿ ಕೇವಲ 10 ಮಂದಿ ಮಾತ್ರ ಈ ಬ್ಲಡ್‌ ಗ್ರೂಪ್‌ ಹೊಂದಿದ್ದಾರೆ. ಈ ವಿಶಿಷ್ಟವಾದ ರಕ್ತದ ಪ್ರಕಾರವನ್ನು ಈಗಿರುವ ‘ಎ’, ‘ಬಿ’, ‘ಓ’ ಅಥವಾ ‘ಎಬಿ’ ಗುಂಪುಗಳಾಗಿ ವರ್ಗೀಕರಿಸಲು ಸಾಧ್ಯವಿಲ್ಲ.
ಇಂತಹ ಅಪರೂಪದ ರಕ್ತದ ಗುಂಪುಗಳನ್ನು ಹೊಂದಿರುವವರು ತಮ್ಮ ರಕ್ತವನ್ನು ಯಾರಿಗೂ ದಾನ ಮಾಡುವಂತಿಲ್ಲ ಅಥವಾ ಯಾರಿಂದಲೂ ರಕ್ತ ಪಡೆಯುವಂತಿಲ್ಲ. ಈವರೆಗೆ ಜಗತ್ತಿನಲ್ಲಿ ಕೇವಲ 9 ಮಂದಿ ಈ ಅಪರೂಪದ ರಕ್ತದ ಗುಂಪನ್ನು ಹೊಂದಿದ್ದರು. 10ನೆಯವರಾಗಿ ಗುಜರಾತ್‌ ವ್ಯಕ್ತಿ ಸೇರ್ಪಡೆಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss