ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಷಿಯಲ್ ಮೀಡಿಯಾ ಜಗತ್ತಿನ ದೈತ್ಯ ಕಂಪನಿ ಮೆಟಾಗೆ ಮತ್ತೊಮ್ಮೆ ಭಾರೀ ಹಿನ್ನಡೆಯಾಗಿದೆ. ಬಳಕೆದಾರರ ಖಾಸಗಿತನದ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಇಟಲಿ ಸರ್ಕಾರದ ಡೇಟಾ ಸಂರಕ್ಷಣಾ ಪ್ರಾಧಿಕಾರ ಮೆಟಾ ಕಂಪನಿಗೆ ಬರೋಬ್ಬರಿ 8,360 ಕೋಟಿ ರೂಪಾಯಿ ದಂಡ ವಿಧಿಸಿದೆ.
ಫೇಸ್ಬುಕ್ ಆ್ಯಪ್ ಮೂಲಕ ಆಂಡ್ರಾಯ್ಡ್ ಬಳಕೆದಾರರ ಮೊಬೈಲ್ ಗ್ಯಾಲರಿಯನ್ನು ಪ್ರವೇಶಿಸುವ ವಿಧಾನವೇ ಈ ವಿವಾದದ ಕೇಂದ್ರಬಿಂದುವಾಗಿದೆ.
ಒಂದೇ ಅನುಮತಿ, ಹಲವು ಪ್ರಶ್ನೆಗಳು
ತನಿಖೆಯ ಪ್ರಕಾರ, ಫೇಸ್ಬುಕ್ ಆ್ಯಪ್ ಬಳಕೆದಾರರ ಫೋನ್ ಗ್ಯಾಲರಿಯನ್ನು ಪ್ರವೇಶಿಸಲು ಒಂದೇ ಅನುಮತಿಯನ್ನು ಕೇಳುತ್ತಿತ್ತು. ಆದರೆ, ಆ ಅನುಮತಿಯ ಮೂಲಕ ಫೋಟೋ ಮತ್ತು ವಿಡಿಯೋಗಳನ್ನು ಕೇವಲ ಅಪ್ಲೋಡ್ ಮಾಡುವುದಷ್ಟೇ ಅಲ್ಲದೆ, ಬಳಕೆದಾರರಿಗೆ ಪೋಸ್ಟ್ ಮಾಡಲು ಸೂಕ್ತವಾದ ಚಿತ್ರಗಳನ್ನು ಶಿಫಾರಸು ಮಾಡುವ ಉದ್ದೇಶವೂ ಇತ್ತು ಎಂಬುದನ್ನು ಸ್ಪಷ್ಟವಾಗಿ ತಿಳಿಸಿರಲಿಲ್ಲ. 2023ರಿಂದ ಈ ವ್ಯವಸ್ಥೆ ಜಾರಿಯಲ್ಲಿದ್ದರೂ, ಬಳಕೆದಾರರಿಗೆ ತಮ್ಮ ಖಾಸಗಿ ಚಿತ್ರಗಳ ಬಳಕೆಯ ಕುರಿತು ಸಮರ್ಪಕ ಮಾಹಿತಿ ಸಿಕ್ಕಿರಲಿಲ್ಲ ಎಂಬುದು ಪ್ರಾಧಿಕಾರದ ಆಕ್ಷೇಪವಾಗಿದೆ.
ಇದನ್ನೂ ಓದಿ:
ಮೆಟಾಗೆ 60 ದಿನಗಳ ಗಡುವು
ಈ ತಪ್ಪನ್ನು ಸರಿಪಡಿಸಲು ಮೆಟಾಗೆ 60 ದಿನಗಳ ಕಾಲಾವಕಾಶ ನೀಡಲಾಗಿದೆ. ಇನ್ನು ಮುಂದೆ ಗ್ಯಾಲರಿ ಪ್ರವೇಶಕ್ಕೆ ಸಂಬಂಧಿಸಿದ ಸೌಲಭ್ಯವನ್ನು ಡಿಫಾಲ್ಟ್ ಆಗಿ ನಿಷ್ಕ್ರಿಯವಾಗಿಡಬೇಕು. ಅದನ್ನು ಬಳಸಲು ಇಚ್ಛಿಸುವವರು ಪ್ರತ್ಯೇಕವಾಗಿ ಅನುಮತಿ ನೀಡಬೇಕು. ಅಲ್ಲದೆ, ಫೋಟೋಗಳಿಗೆ ಆ್ಯಪ್ ಪ್ರವೇಶಿಸುವ ಉದ್ದೇಶ ಮತ್ತು ಅನುಮತಿಯನ್ನು ಹಿಂಪಡೆಯುವ ವಿಧಾನವನ್ನೂ ಬಳಕೆದಾರರಿಗೆ ತಿಳಿಸಬೇಕು.



