ನಮ್ಮ ಮೆಟ್ರೋ ಹಳಿಯ ಮೇಲೆ ಮುರಿದು ಬಿದ್ದ ಮರದ ಕೊಂಬೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಮೆಟ್ರೋ ರೈಲು ಹಳಿಯ ಮೇಲೆ ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ, ಕೆಲ ಕಾಲ ನೇರಳೆ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡು, ಆ ಬಳಿಕ ಮತ್ತೆ ಪುನರಾರಂಭಗೊಂಡಿದೆ.

ಈ ಕುರಿತಂತೆ ಬಿಎಂಆರ್ ಸಿಎಲ್ ಮಾಹಿತಿ ನೀಡಿದ್ದು, ಸುಮಾರು ಸಂಜೆ 04 .51 ಗಂಟೆಗೆ ಮೆಟ್ರೋ ರೈಲು ಸೆಟ್ #23 ನೇರಳೆ ಮಾರ್ಗದಲ್ಲಿ – ಕಬ್ಬನ್ ಪಾರ್ಕ್ ಅಪ್ ರಾಂಪ್‌ನಲ್ಲಿ ಮರದ ಕೊಂಬೆಯು ವಾಕ್‌ವೇ ನಡುವೆ ಬಿದ್ದು ಚಲಿಸುವ ರೈಲಿಗೆ ಅಡ್ಡಿಯಾಗಿದ್ದ ಕಾರಣ ಎಚ್ಚರಿಕೆಯಿಂದ ಚಲಿಸಲಾಯಿತು ಎಂದು ತಿಳಿಸಿದೆ.

ಮರದ ಕೊಂಬೆಯನ್ನು ತೆರವುಗೊಳಿಸಿ, ೫:05 ಗಂಟೆಗೆ ರೈಲು ಸೇವೆ ಎಂದಿನಂತೆ ಪುನರಾರಂಭವಾಯಿತು ಎಂಬುದಾಗಿ ಬಿಎಂಆರ್ ಸಿಎಲ್ ಮಾಹಿತಿ ನೀಡಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!