ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷದ ಹಿಂದೆ ತಾಯಿಯಿಂದಲೇ ಮಾರಾಟವಾಗಿದ್ದ 14 ದಿನಗಳ ಗಂಡು ಮಗುವನ್ನು ಬಳ್ಳಾರಿ ಗ್ರಾಮಾಂತರ ಠಾಣೆಯ ಪೊಲೀಸರು, ಆಂಧ್ರಪ್ರದೇಶದಿಂದ ಕರೆತಂದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವನ್ನು ಖರೀದಿಸಿದ ನವೀನ್‌ಕುಮಾರ್ ಮತ್ತು ಮಗುವಿನ ತಾಯಿಯನ್ನು ಬಂಧಿಸಲಾಗಿದೆ.
ಮಹಿಳೆಯು 2024ರ ಫೆಬ್ರವರಿಯಲ್ಲಿ ಬಳ್ಳಾರಿಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಕಾಲೇಜಿನಲ್ಲಿ (ವಿಮ್) ಗಂಡು ಮಗುವಿಗೆ ಜನ್ಮ ನೀಡಿದ್ದಳು. ಅದೇ ತಿಂಗಳ 20ರಂದು 14 ದಿನಗಳ ಮಗುವನ್ನು ₹ 60 ಸಾವಿರಕ್ಕೆ ಬೇರೊಬ್ಬರಿಗೆ ಮಾರಿದ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಾಯವಾಣಿಗೆ ಅನಾಮಧೇಯ ಕರೆ ಬಂದಿತ್ತು. ಕರೆ ಆಧರಿಸಿ ಅಧಿಕಾರಿಗಳು ಪರಿಶೀಲಿಸಿದಾಗ ಮಗು ಮಾರಾಟವಾಗಿರುವುದು ಖಚಿತವಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡು ಪ್ರಕರಣವನ್ನು ಭೇದಿಸಿದ್ದಾರೆ.
ಮಗುವನ್ನು ಸದ್ಯ ತಾಯಿ ಬಳಿಯೇ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.