Sunday, October 2, 2022

Latest Posts

ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ: ಇಬ್ಬರು ಮಹಿಳಾ ಟೆಕ್ಕಿಗಳು ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚೆನ್ನೈನ ಐಟಿ ಕಾರಿಡಾರ್‌ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಇಬ್ಬರು ಮಹಿಳಾ ಸಾಫ್ಟ್‌ವೇರ್ ವೃತ್ತಿಪರರು ಸಾವನ್ನಪ್ಪಿದ್ದಾರೆ.
ಮೃತರನ್ನು ಲಾವಣ್ಯ (23) ಮತ್ತು ಆರ್ ಲಕ್ಷ್ಮಿ ಎಂದು ಗುರುತಿಸಲಾಗಿದೆ.
ಇಬ್ಬರೂ ಎಚ್‌ಸಿಎಲ್ ಸ್ಟೇಟ್ ಸ್ಟ್ರೀಟ್ ಸರ್ವೀಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ 11.30ರ ಸುಮಾರಿಗೆ ಮನೆಗೆ ತೆರಳುತ್ತಿದ್ದ ವೇಳೆ ಹೊಂಡಾ ಸಿಟಿ ವಾಹನ ಡಿಕ್ಕಿ ಹೊಡೆದಿದೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಕಾರು ಚಾಲಕ ಮೋತೀಶ್ ಕುಮಾರ್ (20) ಎಂಬುವವನನ್ನು ಬಂಧಿಸಲಾಗಿದೆ.ಈತ ಅತಿ ವೇಗವಾಗಿ ಕಾರನ್ನು ಚಲಾಹಿಸುತ್ತಿದ್ದ. ಕಾರು ಗಂಟೆಗೆ ಸುಮಾರು 130 ಕಿಮೀ ವೇಗದಲ್ಲಿ ಓಡುತ್ತಿರುವಂತೆ ತೋರುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲಾವಣ್ಯ ಆಂಧ್ರಪ್ರದೇಶದ ಚಿತ್ತೂರಿನರಾಗಿದ್ದು, ಲಕ್ಷ್ಮಿ ಕೇರಳದ ಪಾಲಕ್ಕಾಡ್‌ ಮೂಲದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!