Monday, March 4, 2024

ACCIDENT | ಗಸ್ತು ತಿರುಗುತ್ತಿದ್ದ ವಾಹನಕ್ಕೆ ಕಾರ್ ಡಿಕ್ಕಿ, ಇಬ್ಬರು ಪೊಲೀಸರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದಲ್ಲಿ ಗಸ್ತು ತಿರುಗುತ್ತಿದ್ದ ವಾಹನಕ್ಕೆ ಕಾರ್ ಡಿಕ್ಕಿಯಾಗಿದ್ದು, ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ.

ಹೌರಾ ಜಿಲ್ಲೆಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ವ್ಯಾನ್‌ಗೆ ವೇಗವಾಗಿ ಬಂದ ಕಾರ್ ಡಿಕ್ಕಿ ಹೊಡೆದಿದೆ. ಸಬ್‌ಇನ್ಸ್‌ಪೆಕ್ಟರ್ ಸುಜೋಯ್ ದಾಸ್ ಹಾಗೂ ಹೋಮ್ ಗಾರ್ಡ್ ಪಲಾಶ್ ಸಮಂತ್ ಮೃತಪಟ್ಟಿದ್ದಾರೆ.

ಚಾಲಕ ಅಬುಬಕರ್, ಗೃಹರಕ್ಷಕದಳದ ಸುಖದೇಬ್ ಬಿಸ್ವಾಸ್ ಹಾಗೂ ಅಲೋಕ್ ಬಾರ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಡಿಕ್ಕಿ ಹೊಡೆದ ಕಾರ್‌ಗಾಗಿ ಹುಡುಕಾಟ ಆರಂಭವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!