ನಮೀಬಿಯಾದಿಂದ ಬಂದ ಚೀತಾಗೆ ಕಿಡ್ನಿಯಲ್ಲಿ ಸೋಂಕು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಮೀಬಿಯಾದಿಂದ (Namibia) ಕಳೆದ ವರ್ಷ ಭಾರತಕ್ಕೆ ಕರೆ ತಂದ 8 ಚೀತಾ (Cheetahs) ಪೈಕಿ ಒಂದು ಚಿರತೆ ಅಸ್ವಸ್ಥಗೊಂಡಿದೆ.

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿರುವ (Kuno National Park) ಸಶಾ ಹೆಸರಿನ ಚೀತಾ ಮೂತ್ರಪಿಂಡದ (Kidney) ಸೋಂಕಿನಿಂದ ಬಳಲುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೈನಂದಿನ ಮೇಲ್ವಿಚಾರಣೆಯ ಸಮಯದಲ್ಲಿ ಹೆಣ್ಣು ಚೀತಾ ಆಯಾಸಗೊಂಡ ಸ್ಥಿತಿಯಲ್ಲಿತ್ತು. ಕೂಡಲೇ ಟ್ರಾನ್ಸ್‌ಕ್ವಿಲೈಸ್ ಮಾಡಿ ಕ್ವಾರಂಟೈನ್‌ ಆವರಣಕ್ಕೆ ಬಿಡಲಾಗಿದೆ. ಆರೋಗ್ಯ ತಪಾಸಣೆಯಲ್ಲಿ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ವಿಚಾರ ತಿಳಿದು ಬಂದಿದೆ.

ಸದ್ಯ ನಿಗಾ ಇಡಲಾಗಿದ್ದು ಉಳಿದ ಚೀತಾಗಳು ಚೆನ್ನಾಗಿವೆ. ಭೋಪಾಲ್‌ನ ವಾನ್ ವಿಹಾರ್‌ನಿಂದ ಡಾ ಅತುಲ್ ಗುಪ್ತಾ ನೇತೃತ್ವದ ವೈದ್ಯರ ತಂಡ ಆಗಮಿಸಿದೆ. ಚಿಕಿತ್ಸೆಗಾಗಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದ ವನ್ಯಜೀವಿ ತಜ್ಞರನ್ನೂ ಸಂಪರ್ಕಿಸಲಾಗಿದೆ ಎಂದು ಕುನೋ ರಾಷ್ಟ್ರೀಯ ಉದ್ಯಾನವನದ ವಿಭಾಗೀಯ ಅರಣ್ಯಾಧಿಕಾರಿ ಪ್ರಕಾಶ್ ಕುಮಾರ್ ವರ್ಮಾ ತಿಳಿಸಿದ್ದಾರೆ.

ವನ್ಯಜೀವಿಗಳನ್ನು(Wildlife) ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ ಭಾರತಕ್ಕೆ 2 ರಿಂದ 6 ವರ್ಷ ವಯಸ್ಸಿನ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು. ತಮ್ಮ ಜನ್ಮದಿನವಾದ ಸೆ.17 ರಂದು ಪ್ರಧಾನಿ ಮೋದಿ (PM Modi) ಈ ಚಿರತೆಗಳು ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!