ಬಾಲಿವುಡ್ ಗೆ ‘ಪಠಾಣ್’ ಬೂಸ್ಟರ್ ಡೋಸ್: ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೊರೋನಾ ಬಳಿಕ ಮಂಕಾದ ಬಾಲಿವುಡ್‌ ಗೆ (Bollywood) ಪಠಾಣ್ ಮೂವಿ ಬೂಸ್ಟರ್ ಡೋಸ್ ರೀತಿ ಸಿಕ್ಕಿದೆ.

ಸಾಕಷ್ಟು ವಿವಾದಗಳ ಮಧ್ಯೆ ರಿಲೀಸ್ ಆಗಿದ್ದ ಶಾರುಖ್ ನಟನೆಯ ಪಠಾಣ್ ಸಿನಿಮಾ ಈಗ ಬಾಕ್ಸಾಫೀಸ್‌ನಲ್ಲಿ (Boxoffice) ದಾಖಲೆ ಬರೆದಿದೆ.

ಮೊದಲ ದಿನವೇ ʻಕೆಜಿಎಫ್‌ 2ʼ ದಾಖಲೆ ಬ್ರೇಕ್ ಮಾಡಿ ಗಲ್ಲಾಪೆಟ್ಟಿಗೆ ತುಂಬಿಸಿಕೊಂಡಿದೆ.

ಹಲವು ವರ್ಷಗಳಿಂದ ಸತತ ಸೋಲು ಕಂಡಿದ್ದ ಶಾರುಖ್ ಖಾನ್ ಅವರು ಈಗ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಮೊದಲ ದಿನ ನಿರೀಕ್ಷೆಗೂ ಮೀರಿ ಕಲೆಕ್ಷನ್ ಆಗಿದೆ. ಪಠಾಣ್’ ಚಿತ್ರದ ಫಸ್ಟ್ ಡೇ ಮತ್ತು ಎರಡನೇ ದಿನ ಕಲೆಕ್ಷನ್ ಸೇರಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.

 

ಗಣರಾಜ್ಯೋತ್ಸವ ದಿನ (ಜ.26) ರಜೆ ದಿನ ಕಾರಣ ಸಿನಿಮಾಗೆ ಮತ್ತಷ್ಟು ಪ್ಲಸ್ ಪಾಯಿಂಟ್ ಆಗಿದೆ. ಸಿನಿಮಾ ನೋಡಲು ಫ್ಯಾನ್ಸ್ ಚಿತ್ರಮಂದಿರದತ್ತ ಮುಗಿಬಿದ್ದಿದ್ದಾರೆ. ಈ ಮೂಲಕ ಸಿನಿಮಾ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!