ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ಡೀಗ್ ಜಿಲ್ಲೆಯ ಭರತ್‌ಪುರದಲ್ಲಿ 26 ಬೆರಳುಗಳುಳ್ಳ ಹೆಣ್ಣು ಮಗು ಜನಿಸಿದೆ.
ಹೌದು, 26 ಬೆರಳುಗಳಿರುವ ಹೆಣ್ಣುಮಗುವನ್ನು ಇಡೀ ಗ್ರಾಮ ದೇವಿಯ ಸ್ವರೂಪ ಎಂದು ಪೂಜಿಸುತ್ತಿದೆ. ಎರಡು ಕೈಯಲ್ಲಿಯೂ ಏಳು ಬೆರಳು ಹಾಗೂ ಕಾಲಿನಲ್ಲಿ ಆರು ಬೆರಳುಗಳನ್ನು ಮಗು ಹೊಂದಿದೆ.
ಗ್ರಾಮಸ್ಥರು ಮಗು ದೈವಿ ಸ್ವರೂಪ ಎಂದು ಹೇಳಿದಾಗ ಪೋಷಕರು ವೈದ್ಯರ ಸಲಹೆಗೆ ಮುಂದಾಗಿದ್ದಾರೆ.
ಅನುವಂಶೀಯ ಅಸ್ವಸ್ಥತೆಯಿಂದಾಗಿ ಈ ರೀತಿ 26 ಬೆರಳುಗಳು ಬೆಳವಣಿಗೆ ಆಗಿವೆ. ಇದರಿಂದಾಗಿ ಮಗುವಿನ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಪೋಷಕರು ಮಗಳು ದೈವಿ ಸ್ವರೂಪ ಎಂದು ಭಾವಿಸಿದ್ದು, ಈ ರೀತಿ ಇರುವ ಮಗು ಹುಟ್ಟಿರುವುದು ನಮ್ಮ ಅದೃಷ್ಟ ಎಂದಿದ್ದಾರೆ.