ಹೊಸದಿಗಂತ ವರದಿ,ಹುಬ್ಬಳ್ಳಿ:
ಲ್ಯಾಮಿಂಗ್ಟನ್ ಶಾಲೆಯ ಮಕ್ಕಳು ದಿನವೂ ಬಸ್‌ಗಾಗಿ ಸರ್ಕಸ್ ಮಾಡುವಂತಾಗಿದೆ. ಬಸ್ಸಿನಲ್ಲಿ ಹತ್ತುವುದಕ್ಕಾಗಿ ಹಿಂದೆ ಮುಂದೆ ಓಡಾಡುವ ವಾಹನಗಳನ್ನು ಲೆಕ್ಕಿಸದೇ ಓಡಾಡುವಂತಾಗಿದೆ.
ಅಲ್ಲದೇ ಚಲಿಸುವ ಬಸ್‌ನಲ್ಲಿ ಹತ್ತುವುದು ಇಳಿಯುವುದು ಇತರ ವಾಹನ ಸವಾರರಿಗೆ ತಲೆನೋವಾಗಿದೆ. ಗುಂಪು ಗುಂಪಾಗಿ ಚಲಿಸುವ ಬಸ್ ಹತ್ತಲು ಹೋಗಿ ಏನಾದರೂ ಅಪಘಾತ ಸಂಭವಿಸಿದರೇ ಯಾರು ಹೊಣೆ ಎಂಬುವಂತ ಯಕ್ಷ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಬಸ್‌ಗಾಗಿ ವಿದ್ಯಾರ್ಥಿಗಳು ಪರದಾಡುವ ಪ್ರಸಂಗಕ್ಕೆ ಬ್ರೇಕ್ ಬೀಳುವ ಲಕ್ಷಣಗಳು ಕಾಣುತ್ತಿಲ್ಲ. ಬಸ್ ಹತ್ತಲು ಚಲಿಸುವ ಬಸ್‌ನಲ್ಲಿಯೇ ವಿದ್ಯಾರ್ಥಿಗಳು ಸರ್ಕಸ್ ಮಾಡುವಂತಾಗಿದೆ.
ಅಲ್ಲದೇ ವಿದ್ಯಾರ್ಥಿಗಳು ಹತ್ತುತ್ತಿದ್ದರೂ ಬಸ್ ಚಾಲಕ ಮಾತ್ರ ಬೇಕಾಬಿಟ್ಟಿಯಾಗಿ ಬಸ್ ಚಲಾಯಿಸಿಕೊಂಡು ಹೋಗುತ್ತಿರುವ ಅದೆಷ್ಟೋ ಘಟನೆಗಳು ನಡೆದಿವೆ. ಇದಕ್ಕೆ ಸಾಕ್ಷಿ ಎಂಬುವಂತೇ ಸೋಮವಾರ ನಡೆದಿರುವ ಈ ಘಟನೆಯಲ್ಲಿ ವಿದ್ಯಾರ್ಥಿಗಳ ಬೇಜವಾಬ್ದಾರಿತನ ನಿಜಕ್ಕೂ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಇನ್ನೂ ಹಲವಾರು ಬಾರಿಗೆ ಬಸ್ಸಿನ ಸಮಸ್ಯೆ ಕುರಿತು ವರದಿಯನ್ನು ಬಿತ್ತರಿಸಿದ್ದೇವೆ. ಆದರೂ ಕೂಡ ಸಾರಿಗೆ ಇಲಾಖೆಯ ಅಕಾರಿಗಳು ಸಮರ್ಪಕವಾಗಿ ಬಸ್ ವ್ಯವಸ್ಥೆ ಮಾಡದೇ ಇರುವುದು ಬೇಸರದ ಸಂಗತಿಯಾಗಿದೆ. ಅದು ಏನೇ ಇರಲಿ ವಿದ್ಯಾರ್ಥಿಗಳು ಚಲಿಸುವ ಬಸ್ ಹತ್ತುವುದು ಇಳಿಯುವುದನ್ನು ಮಾಡದೇ ಸಂಚಾರಿ ನಿಯಮ ಪಾಲಿಸಬೇಕಿದೆ.