ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ನಾರ್ಥ್ ಇಂಡಿಯಾದವರು ಬೆಂಗಳೂರಿನಲ್ಲಿ ಇಲ್ಲದೇ ಹೋದ್ರೆ ನಿಮ್ಮ ಬೆಂಗಳೂರು ಖಾಲಿ ಖಾಲಿ ಆಗಿರುತ್ತದೆ ಎಂದು ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ನಾರ್ಥಿ ಲೇಡಿಗೆ ನಮ್ಮ ಸೆಲೆಬ್ರಿಟಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ.
ಸುಗಂಧಾ ಎಂಬ ನಾರ್ಥಿ ಲೇಡಿ ಈಗಾಗಲೇ ರೀಲ್ಸ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ, ಕೆಲಸದಿಂದ ಅವರನ್ನು ಕಿತ್ತುಹಾಕಿದ್ದು, ನಿಜವಾಗಿಯೂ ಬೆಂಗಳೂರು ಬಿಡುವ ಪರಿಸ್ಥಿತಿ ಬಂದಿದೆ. ಸುಗಂಧ ರೀಲ್ಸ್‌ಗೆ ನಮ್ಮ ಸೆಲೆಬ್ರಿಟಿಗಳ ಕಮೆಂಟ್ ಹೀಗಿದೆ ನೋಡಿ..
ಚೈತ್ರಾ ಆಚಾರ್
ನಮ್ಮ ಬೆಂಗಳೂರನ್ನು ಬಿಟ್ಟು ತೊಲಗು, ಬೆಂಗಳೂರು ಖಾಲಿ ಖಾಲಿ ಆಗತ್ತಾ ಇಲ್ವಾ ನೋಡೋಣ, ಪಬ್‌ಗಳಲ್ಲಿ ಕಡಿಮೆ ಜನ ಕುಣಿತಾರೆ, ಇಡೀ ಬೆಂಗಳೂರಿನಲ್ಲಿ ಜನರು ಕಡಿಮೆಯಾಗ್ತಾರೆ. ಇದರಲ್ಲಿ ನಮಗೆ ಯಾವ ಬೇಜಾರೂ ಇಲ್ಲ, ಖುಷಿಯಿಂದ ಬಾಳ್ತೇವೆ. ಬೇರೆ ನಾರ್ಥ್ ಇಂಡಿಯನ್ಸ್ ಬಿಡು ಮೊದಲು ನೀನು ಹೋಗು ಸಾಕು..
ಅನುಪಮಾ ಗೌಡ
ಈ ರೀತಿ ವಿಡಿಯೋ ಮಾಡಿ ಹಾಕೋದು ಕೂಲ್ ಅಂದ್ಕೊಂಡ್ರಾ? ಬೆಂಗಳೂರು ಬೇಕಾಗಿರೋದು ನಿಮಗೆ, ನೀವಿಲ್ದೆ ಬೆಂಗಳೂರಿಗೆ ಏನೂ ಆಗ್ಬೇಕಿಲ್ಲ. ನಮ್ಮೂರು ನಮ್ಮೂರಾಗೇ ಉಳಿಯತ್ತೆ. ನಿಮಗೆ ಈ ಊರು ಬಿಟ್ಟು ಹೋಗೋಕೆ ಸಾಧ್ಯನಾ? ಖಂಡಿತಾ ಇಲ್ಲ!
ಚಂದನ್ ಶೆಟ್ಟಿ
ಅಷ್ಟೊಂದು ಕಷ್ಟ ಆಗ್ತಿದ್ಯಾ? ಪ್ಲೀಸ್ ಈಗ್ಲೇ ಹೊರಡಿ
ವರ್ಷಾ ಬೋಲಮ್ಮ
ನಿಮ್ ಮಾತು ಕೇಳಿ ಎಕ್ಸೈಟ್ ಆಗ್ತಿದೆ ಯಾವಾಗ ಊರು ಬಿಡ್ತೀರಾ?
ರೂಪೇಶ್ ರಾಜಣ್ಣ
ಮೇಡಂ ಸ್ವಲ್ಪ ನಿಮ್ಮ ಡೀಟೇಲ್ಸ್ ಕೊಡಿ ಮಾತಾಡೋಣ