ರೈಲ್ವೇ ಹಳಿಗೆ ಉರುಳಿ ಬಿದ್ದ ಕಾಂಕ್ರೀಟ್ ಮಿಕ್ಸರ್ ಯಂತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ರೈಲ್ವೇ ನಿಲ್ದಾಣದಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಯಂತ್ರವೊಂದು ಚಾಲಕನ ನಿಯಂತ್ರಣ ತಪ್ಪಿ ಪ್ಲಾಟ್ ಪಾರ್ಮ್ ನಿಂದ ಕೆಳಗೆ ರೈಲ್ವೇ ಹಳಿಗೆ ಉರುಳಿ ಬಿದ್ದ ಘಟನೆ ಬುಧವಾರ ನಡೆದಿದೆ.

ಘಟನೆಯಿಂದ ಯಾವುದೇ ಪ್ರಾಣಾಪಾಯ ಅಗಿಲ್ಲ. ರೈಲು ಆಗಮಿಸುವ ಮೊದಲು ಯಂತ್ರವನ್ನು ತೆರವು ಗೊಳಿಸಬೇಕಾದ ಹಿನ್ನೆಲೆಯಲ್ಲಿ ಕ್ರೇನ್ ಮೂಲಕ ರಾತ್ರಿಯೇ ಹಳಿಯಿಂದ ಯಂತ್ರವನ್ನು ತೆರವುಗೊಳಿಸುವ ಕಾರ್ಯ ನಡೆಸಲಾಯಿತು. ಘಟನೆ ಸಂದರ್ಭ ಯಾವುದೇ ರೈಲುಗಳಾಗಲೀ, ಮನುಷ್ಯರ ಸಂಚಾರವಾಗಲೀ ಅಲ್ಲಿಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿಹೋಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!