ಬರೋಬ್ಬರಿ 11 ವರ್ಷಗಳ ನಂತರ ಸೆರೆ ಸಿಕ್ಕಿದ್ದಾನೆ ಅಪರಾಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಯುವತಿಯೊಬ್ಬರ ಸಾವಿಗೆ ಕಾರಣವಾಗಿ, ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯೊಬ್ಬ ಬರೋಬ್ಬರಿ 11 ವರ್ಷಗಳ ನಂತರ ಸೆರೆ ಸಿಕ್ಕಿದ್ದಾನೆ. ವಿಜಯನಗರ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ಮಾಗಡಿ ರಸ್ತೆಯ ಅಂಜನಾ ನಗರದ ಗೋಪಾಲಕೃಷ್ಣ (60) ಬಂಧಿತ ಅಪರಾಧಿ. ಈತ 2011ರ ಮೇ 17ರಂದು ಮರಳು ತುಂಬಿದ ಲಾರಿಯನ್ನು ಅತೀ ವೇಗ ಹಾಗೂ ಆಜಾಗರೂಕತೆಯಿಂದ ಚಲಾಯಿಸಿ, ವಿಜಯನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮನೀಶಾ(30)ಎಂಬವರ ಮೇಲೆ ಹತ್ತಿಸಿದ್ದ. ಪರಿಣಾಮ ಮನೀಶಾ ಸ್ಥಳದಲ್ಲೇ ಮೃತಪಟ್ಟಿದ್ದರು.

ಸಂಚಾರ ಪೊಲೀಸರು ಆರೋಪಿಯನ್ನು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಿದ್ದರು. ವಿಚಾರಣೆ ಬಳಿಕ ಆರೋಪಿಗೆ ಕೋರ್ಟ್ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ವಿಚಾರ ತಿಳಿಯುತ್ತಿದ್ದಂತೆ ಅಪರಾಧಿ ತಲೆಮರೆಸಿಕೊಂಡಿದ್ದ.

ಇತ್ತೀಚೆಗೆ ಶಿಕ್ಷೆಗೆ ಗುರಿಯಾಗಿ ಬಾಕಿ ಉಳಿದಿರುವ ವಾರೆಂಟ್‌ಗಳನ್ನು ಪರಿಶೀಲಿಸಿದಾಗ ಗೋಪಾಲಕೃಷ್ಣನ ಅಪಘಾತ ಪ್ರಕರಣ ಪತ್ತೆಯಾಗಿದೆ. ಕಾರ್ಯಾಚರಣೆ ನಡೆಸಿದ ವಿಜಯನಗರ ಠಾಣೆ ಹೆಡ್ ಕಾನ್ಸ್‌ಟೆಬಲ್ ಮಂಜುನಾಥ್ ಆರೋಪಿಯನ್ನು ಪತ್ತೆ ಹಚ್ಚಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಬಿಎಂಟಿಸಿಯಲ್ಲಿ 1981ರಿಂದ 2001ರವರೆಗೆ ಚಾಲಕನಾಗಿದ್ದ ಗೋಪಾಲಕೃಷ್ಣ, ಕರ್ತವ್ಯಕ್ಕೆ ಗೈರಾಗುತ್ತಿದ್ದರಿಂದ ಕೆಲಸದಿಂದ ವಜಾಗೊಳಿಸಲಾಗಿತ್ತು. ನಂತರ ಮರಳು ಲಾರಿಯ ಚಾಲಕನಾಗಿ ಕೆಲಸ ಮಾಡುತ್ತಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!