Wednesday, August 17, 2022

Latest Posts

ವಿಜಯಪುರ: ಹರ್ಷ ಹತ್ಯೆ ಖಂಡಿಸಿ ವಿಶ್ವ ಹಿಂದೂಪರಿಷತ್, ಭಜರಂಗದಳ ಕಾರ್ಯಕರ್ತರಿಂದ ಪ್ರತಿಭಟನೆ

ಹೊಸದಿಗಂತ ವರದಿ, ವಿಜಯಪುರ:

ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ವಿಶ್ವ ಹಿಂದೂಪರಿಷತ್, ಭಜರಂಗದಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಿದರು.
ಪ್ರತಿಭಟನಾಕಾರರು, ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ, ಪ್ರತಿಭಟಿಸಿದರು. ಪ್ರತಿಭಟನೆಯಲ್ಲಿ ಸ್ವಾಮೀಜಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಕೇಸರಿ ಶಾಲು ಧರಿಸಿ ಬಂದ ಪ್ರತಿಭಟನಾಕಾರರು,ಜೈ ಶ್ರೀರಾಮ, ಭಜರಂಗಿ ಘೋಷಣೆ ಪ್ರತಿಭಟನಾ ವೇಳೆ ಮೊಳಗುತ್ತಿತ್ತು.
ಪ್ರತಿಭಟನೆಯಲ್ಲಿ ಸೋಮಲಿಂಗ ಮಹಾರಾಜ, ಬುರಣಾಪುರದ ಯೋಗೇಶ್ವರಿ ಮಾತಾ, ಮನಗೂಳಿಯ ವೀರ ರತಿಶಾನಂದ ಸ್ವಾಮೀಜಿ, ವಿಶ್ವ ಹಿಂದೂಪರಿಷತ್, ಭಜರಂಗದಳ ಮುಖಂಡ ಸುನೀಲ ಭೈರವಾಡಗಿ, ಸಂತೋಷ ನಾಯಕ, ನೀಲಕಂಠ ಕಂದಗಲ್, ಆನಂದ ಕುಲಕರ್ಣಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!