ಮತದಾನ ಜಾಗೃತಿಗೆ ನಡೆಯಿತು ಕ್ರಿಕೆಟ್ ಪಂದ್ಯ: ಕಾಸರಗೋಡಿನ ಗ್ರೌಂಡ್‌ನಲ್ಲಿ ಮಿಂಚಿದ ಸ್ವೀಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತ್ಯಧಿಕ ಪ್ರಮಾಣದಲ್ಲಿ ಮತದಾನ ನಡೆಯುವಂತೆ ಮಾಡಲು ವಿವಿಧ ರೀತಿಯಲ್ಲಿ ಮತದಾರರನ್ನು ಸೆಳೆಯುತ್ತಿರುವ ಸ್ವೀಪ್, ಕಾಸರಗೋಡು ಜಿಲ್ಲೆಯ ಉಳಿಯತ್ತಡ್ಕ ಗ್ರೀನ್ ಫೀಲ್ಡ್ ಟರ್ಫ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಮ್ಯಾಚ್ ಹಮ್ಮಿಕೊಂಡು ಎಲ್ಲರ ಗಮನಸೆಳೆದಿದೆ!

ಮತದಾನ ಜಾಗೃತಿಯ ಅಂಗವಾಗಿ ಯುವ ಜನರನ್ನು ಟಾರ್ಗೆಟ್ ಮಾಡಿ ಯೋಜಿಸಿರುವ ಈ ಪಂದ್ಯದಲ್ಲಿ ವಿವಿಧ ಇಲಾಖೆಗಳ ಹಾಗೂ ಕುಟುಂಬಶ್ರೀ ಘಟಕ ಪ್ರತಿನಿಧಿಸುವ ಒಟ್ಟು ಆರು ತಂಡಗಳು ಭಾಗವಹಿಸಿದ್ದವು. ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ. ಕೈನಿಕರ ಪಂದ್ಯಾಟಕ್ಕೆ ಚಾಲನೆ ನೀಡಿ ಆಟಗಾರರನ್ನು ಹುರಿದುಂಬಿಸಿದರು.

ಸ್ವೀಪ್ ನೋಡಲ್ ಅಧಿಕಾರಿ ಟಿ.ಟಿ. ಸುರೇಂದ್ರನ್, ಡಿ. ಹರಿದಾಸ್, ಬೈಜು, ಸುಮಾ, ಪಿ.ರತ್ನೇಶ್, ಎಂ. ಶೀಬಾ, ಇ.ಶಿಬಿ, ಟಿ.ಪಿ. ಆದಿರ, ಸಫಾ ಮುರ್ಷಿದಾ ಪಂದ್ಯಕ್ಕೆ ನೇತೃತ್ವ ನೀಡಿದರು. ಸ್ಪರ್ಧೆ ಮಾತ್ರವಲ್ಲದೆ ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಕೂಡಾ ನೀಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!