ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಗ್ರೆಶನ್‌ಗೆ ಹೆಸರುವಾಸಿಯಾಗಿರುವ ಬಾಂಗ್ಲಾದೇಶದ ಕ್ರಿಕೆಟಿಕ ಶಕೀಬ್ ಅಲ್ ಹಸನ್ ಮತ್ತೆ ವಿವಾದಕ್ಕೀಡಾಗಿದ್ದಾರೆ.
ಸೆಲ್ಫಿ ಕೇಳಲು ಬಂದ ಅಭಿಮಾನಿ ಕೆನ್ನೆಗೆ ಬಾರಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಬಾಂಗ್ಲಾದೇಶದ ಸಂಸತ್ ಚುನಾವಣೆಯಲ್ಲಿ ಸ್ಫರ್ಧಿಸಿ ಗೆಲುವು ಸಾಧಿಸಿದ ಶಕೀಬ್ ಮತ ಎಣಿಕೆ ಕೇಂದ್ರದ ಬಳಿ ಬಂದಿದ್ದರು.
ಈ ಸಮಯದಲ್ಲಿ ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು, ಶಕೀಬ್ ಆತನ ಕೆನ್ನೆಗೆ ಹೊಡೆದಿದ್ದಾರೆ. ಶಕೀಬ್‌ಗೆ ಹೇಗೆ ಒಂದು ಜೀವನ ಇದೆಯೋ ಅಭಿಮಾನಿಗೂ ಒಂದು ಜೀವನ ಇದೆ, ಆತನೂ ಮರುದಿನ ಕೆಲಸಕ್ಕೆ ಹೋಗಬೇಕು, ಕುಟುಂಬದವರನ್ನು ಫೇಸ್ ಮಾಡಬೇಕು, ಈ ರೀತಿ ದುರ್ವರ್ತನೆ ತಪ್ಪು ಎಂದು ನೆಟ್ಟಿಗರು ಸಿಟ್ಟಾಗಿದ್ದಾರೆ.
Shakib Al Hasan slapped a fan..!pic.twitter.com/KaUbabgkCX
— Mufaddal Vohra (@mufaddal_vohra) January 7, 2024