Friday, March 1, 2024

40 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಇಒ ಕಚೇರಿ ಎಸ್.ಡಿ.ಎ

ಹೊಸದಿಗಂತ ವರದಿ ಚಿಕ್ಕಮಗಳೂರು:

ನಿವೃತ್ತ ಮುಖ್ಯೋಪಾಧ್ಯಾಯನಿಂದ 40 ಸಾವಿರ ಲಂಚ ಪಡೆಯುವ ವೇಳೆ ಬೀರೂರು ಬಿಇಒ ಕಚೇರಿ ಎಸ್.ಡಿ.ಎ ಚಂದ್ರಶೇಖರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ತರೀಕೆರೆ ತಾಲ್ಲೂಕಿನ ಹೊಸಗಂಗೂರು ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ವಯೋ ನಿವೃತ್ತಿ ಹೊಂದಿದ ಎನ್.ಪರಮೇಶ್ ತಮ್ಮ ನಿವೃತ್ತಿ ನಂತರ ಸರ್ಕಾರದಿಂದ ಬರಬೇಕಾದ ಜಿ.ಪಿ.ಎಫ್ ಹಾಗೂ ಜಿ.ಐಎಸ್ ಪಡೆದುಕೊಳ್ಳಲು ಬೀರೂರು ಬಿಇಒ ಕಚೇರಿಗೆ ತೆರಳಿದ ವೇಳೆ ನೀವು ಸರ್ಕಾರಕ್ಕೆ ಕಟ್ಟಬೇಕಿದ್ದ ಟ್ಯಾಕ್ಸ್ ಉಳಿಸಿಕೊಂಡಿದ್ದೀರಿ, ಅದರ ಬಾಕಿ ಇದೆ. ಅದನ್ನು ನಾನು ಸರಿ ಮಾಡುತ್ತೇನೆ.

ನನಗೆ ಬಂದ ಹಣದಲ್ಲಿ ಅರ್ಧ ಕೊಡಬೇಕು ಎಂದು ಚಂದ್ರಶೇಖರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಇಂದು 40 ಸಾವಿರ ಲಂಚದ ಹಣ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!