ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನಡೆಯುವ ಕಂಬಳಕ್ಕೆ ಸಿಎಂ ಸಿದ್ದರಾಮಯ್ಯ ಒಂದು ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ.
ಒಟ್ಟಾರೆ 5 ಲಕ್ಷ ಮಂದಿ ಕಂಬಳಕ್ಕೆ ಆಗಮಿಸುವ ನಿರೀಕ್ಷೆ ಇದೆ, ವಿಶೇಷವೆಂದರೆ ಕಂಬಳಕ್ಕೆ ಐಶ್ವರ್ಯಾ ರೈ ಹಾಗೂ ಅನುಷ್ಕಾ ಶೆಟ್ಟಿ ಕೂಡ ಆಗಮಿಸಲಿದ್ದಾರೆ.
ಈಗಾಗಲೇ 150ಕ್ಕೂ ಹೆಚ್ಚು ಕೋಣಗಳ ನೋಂದಣಿಯಾಗಿದೆ. ಒಟ್ಟಾರೆ 70 ಎಕರೆ ಜಾಗವಿರುವ ಬೆಂಗಳೂರು ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಕರಾವಳಿ ಮೂಲದ ಸಿನಿ ತಾರೆಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ರೈ ಹೇಳಿದ್ದಾರೆ.