ಅ. 3 ರಿಂದ ಗದಗದ ಅಬ್ಬಿಗೇರಿಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ

ಹೊಸದಿಗಂತ ವರದಿ, ಚಿಕ್ಕಮಗಳೂರು:

ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ 33ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಗದಗ ಜಿಲ್ಲೆ ರೋಣ ತಾಲೂಕು ಅಬ್ಬಿಗೇರಿ ಶ್ರೀ ಅನ್ನದಾನೇಶ್ವರ ಪ್ರೌಢ ಶಾಲೆ ಆವರಣದ ಮಾನವ ಧರ್ಮ ಮಂಟಪ- ಬೃಹತ್ ವೇದಿಕೆಯಲ್ಲಿ ಆಯೋಜನೆಗೊಂಡಿದೆ.

ಕರುನಾಡಿನ ಜನಮಾನಸದ ಬೃಹತ್ ಜಾತ್ರೆ ಎಂದೇ ಖ್ಯಾತವಾದ ದಸರಾ ಧರ್ಮ ಸಮ್ಮೇಳನ ಅಕ್ಟೋಬರ್ 3ರಿಂದ 12ರ ವರೆಗೆ ಸಂಪನ್ನಗೊಳ್ಳಲಿದ್ದು, ಪ್ರತಿ ದಿನವೂ ವೈವಿಧ್ಯಮಯ ಕಾರ್ಯಕ್ರಮ, ವಿವಿಧ ರಂಗದ ಗಣ್ಯರಿಗೆ ಪ್ರಶಸ್ತಿ ಪ್ರದಾನ, ಗಣ್ಯಾತಿಗಣ್ಯರ ಭಾಷಣ, ರಾಜ್ಯದ ಹತ್ತು ಹಲವು ಕ್ಷೇತ್ರದ ತಜ್ಞರಿಂದ ಉಪನ್ಯಾಸ ಸೇರಿದಂತೆ ವರ್ಣರಂಜಿತ ಸಾಂಸ್ಕೃತಿಕ ವೈವಿಧ್ಯಗಳೂ ರಂಜಿಸಲಿವೆ.

ಪ್ರತಿ ದಿನದ ಕಾರ್ಯಕ್ರಮಗಳು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಲಿವೆ.

ಪ್ರಶಸ್ತಿ ಘೋಷಣೆ
2024ನೇ ಸಾಲಿನ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ತೆಲಂಗಾಣದ ಆರ್.ಎಂ. ಪ್ರಭುಲಿಂಗ ಶಾಸ್ತ್ರಿ,ರಂಭಾಪುರಿ ಯುವಸಿರಿ ಪ್ರಶಸ್ತಿಯನ್ನು ದಾವಣಗೆರೆ ಎಚ್.ಎಂ. ಬಸವರಾಜಯ್ಯ, ಅಕ್ಕಿ ರಾಜು), ವೀರಶೈವ ಸಿರಿ ಪ್ರಶಸ್ತಿಯನ್ನು ಶಾಸಕ ಜಿ.ಎಸ್.ಪಾಟೀಲ, ಶಿವಾಚಾರ್ಯ ರತ್ನ ಪ್ರಶಸ್ತಿಯನ್ನು ಎಡೆಯೂರು ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಹಾಗೂ ಸಾಧನ ಸಿರಿ ಪ್ರಶಸ್ತಿಯನ್ನು ನರೇಗಲ ಸವದತ್ತಿ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಘೋಷಣೆ ಮಾಡಲಾಗಿದೆ. ದಸರಾ ದರ್ಬಾರಿನಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಸಾಧಕರಿಗ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!